ಸುದ್ದಿಕನ್ನಡ ವಾರ್ತೆ
Goa: ಇನ್ನು ಮುಂದು ಗೋವಾದಲ್ಲಿ ಪೋಸ್ಟ ಮ್ಯಾನ್ ಆಗಿ ನೇಮಕಾತಿಯಾಗಬೇಕಾದರೆ ಕೊಂಕಣಿ ಭಾಷೆ ತಿಳಿದಿರುವುದು ಖಡ್ಡಾಯವಾಗಿದೆ. ಕೊಂಕಣಿ ಭಾಷೆ ತಿಳಿದಿರುವ ಅಭ್ಯರ್ಥಿಗಳನ್ನು ಮಾತ್ರ ಗೋವಾದಲ್ಲಿ ಪೋಸ್ಟ ಮ್ಯಾನ್ ಗಳಾಗಿ ನೇಮಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ಸಾರೆ.

ಸಮಯಕ್ಕೆ ಸರಿಯಾಗಿ ಪೋಸ್ಟನಲ್ಲಿ ಬಂದ ಪತ್ರಗಳು ಲಭಿಸದ ಕಾರಣ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಂಕಣಿ ಭಾಷೆಯ ಜ್ಞಾನವಿರುವ ಅಭ್ಯರ್ಥಿಗಳನ್ನು ಮಾತ್ರ ಪೋಸ್ಟ ಮ್ಯಾನ್ ಹುದ್ದೆಗೆ ನೇಮಕಾತಿ ಮಾಡಬೇಕು ಎಂದು ದೆಹಲಿಯ ಅಂಚೆ ಇಲಾಖೆಯ ಅಧಿಕಾರಿಗಳಿಗೆ ಗೋವಾದಿಂದ ದೂರು ಬಂದಿದೆ ಎನ್ನಲಾಗಿದೆ.

ಅಂಚೆ ಸಿಬ್ಬಂಧಿಗಳನ್ನಾಗಿ ಗೋವಾದ ಸ್ಥಳೀಯರನ್ನೇ ನೇಮಕಾತಿ ಮಾಡಿಕೊಳ್ಳಬೇಕು ಎಂಬ ಬೇಡಿಕೆಯಿದೆ. ಈ ಬೇಡಿಕೆಯನ್ನು ಗಮನಿಸಿದ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ದೆಹಲಿಯ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕೂಡ ಸರ್ಕಾರಿ ದಾಖಲೆಗಳನ್ನು ಜನತೆ ಅಂಚೆಯ ಮೈಲಕವೇ ಪಡೆಯುತ್ತಾರೆ. ಈ ದಾಖಲೆಗಳು ವಿಳಂಭವಾದರೆ ದೊಡ್ಡ ನಷ್ಠವಾಗುವ ಸಾಧ್ಯತೆಯೂ ಇರುತ್ತದೆ. ಆದ್ಧರಿಂದ ಸ್ಥಳೀಯ ಭಾಷೆಯ ಜ್ಞಾನವಿರುವವರನ್ನೇ ಪೋಸ್ಟಮ್ಯಾನ್ ಗಳನ್ನಾಗಿ ನೇಮಕ ಮಾಡಬೇಕೆಂಬ ಬೇಡಿಕೆ ಹೆಚ್ಚುತ್ತಿದೆ.