ಸುದ್ಧಿಕನ್ನಡ ವಾರ್ತೆ
Goa : ಗೋವಾದಿಂದ ಮುಂಬಯಿಗೆ ಹೊರಡಬೇಕಿದ್ದ ಇಂಡಿಗೊ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ಗೋವಾದಲ್ಲಿ ಸೋಮವಾರ ಸಂಜೆ ನಡೆದಿದೆ.
ಇಂಡಿಗೊ ವಿಮಾನ 6ಇ 5101 ಇದು ಗೋವಾದಿಂದ ಮುಂಬಯಿಗೆ ತೆರಳಬೇಕಿತ್ತು. ಅಷ್ಟರಲ್ಲಿಯೇ ಈ ವಿಮಾನದಲ್ಲಿ ಬಾಂಬ್ ಇರುವುದಾಗಿ ಇಂಡಿಗೊ ಕಂಪನಿಗೆ ಬೆದರಿಕೆ ಕರೆ ಬಂತು. ಕೂಡಲೇ ತಪಾಸಣಾ ಕಾರ್ಯ ನಡೆಸಿ ವಿಮಾನ ನಿಲ್ದಾಣದಲ್ಲಿ ಭಧ್ರತೆ ಹೆಚ್ಚಿಸಲಾಯಿತು. ತಪಾಸಣೆ ಪೂರ್ಣಗೊಂಡ ನಂತರ ಇದು ಒಂದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ಸ್ಪಷ್ಟವಾಯಿತು. ನಂತರ ವಿಮಾನ ಗೋವಾದಿಂದ ಮುಂಬಯಿಗೆ ಪ್ರಯಾಣ ಬೆಳೆಸಿತು ಎಂಬ ಮಾಹಿತಿ ಲಭ್ಯವಾಗಿದೆ.