ಸುದ್ಧಿಕನ್ನಡ ವಾರ್ತೆ
Goa-Hubli: ಗೋವಾದಲ್ಲಿ ಅಪಹರಣವಾಗಿದ್ದ 16 ವರ್ಷದ ಬಾಲಕಿಯನ್ನು ಅಪಹರಣವಾಗಿ ಕೇವಲ 6 ಗಂಟೆಗಳಲ್ಲಿ ಹುಬ್ಬಳ್ಳಿಯಲ್ಲಿ ಪತ್ತೆಹಚ್ಚಿ ಸರಕ್ಷಿತವಾಗಿ ಕರೆತರುವಲ್ಲಿ ಗೋವಾ ಪೋಲಿಸರು ಯಶಸ್ವಿಯಾಗಿದ್ದಾರೆ.
ಗೋವಾದ ಮಹಮ್ಮದ್ ಶಬ್ಬೀರ್ ಬಳ್ಳಾರಿ ಎಂಬುವರು ತಮ್ಮ 16 ವರ್ಷದ ಅಪ್ರಾಪ್ತ ಬಾಲಕಿ ಅಪಹರಣವಾಗಿರುವುದಾಗಿ ಪೋಲಿಸ್ ದೂರು ನೀಡಿದ್ದರು. ಪೋಲಿಸರು ಕೂಡಲೇ ತನಿಖಾ ಕಾರ್ಯ ಕೈಗೆತ್ತಿಕೊಂಡರು. ಬಲಕಿಯನ್ನು ಕರ್ನಾಟಕದ ಹುಬ್ಬಳ್ಳಿಗೆ ಕರೆದೊಯ್ದಿರುವ ಕುರಿತ ನಿಖರ ಮಾಹಿತಿಯ ಮೇರೆಗೆ ಹುಬ್ಬಳ್ಳಿಗೆ ಗೋವಾ ಬಿಚೋಲಿ ಪೋಲಿಸ್ ನಿರೀಕ್ಷಕ ದಿನೇಶ್ ಗಾಡೇಕರ್ ರವರ ನೇತೃತ್ವದ ಪೋಲಿಸ್ ತಂಡ ಬಾಲಕಿಯನ್ನು ಹುಬ್ಬಳ್ಳಿಯಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ಗೋವಾ ಪೋಲಿಸರು ಈ ಅಪ್ರಾಪ್ತ ಬಾಲಕಿಯನ್ನು ಪತ್ತೆಹಚ್ಚಿ, ಸುರಕ್ಷಿತವಾಗಿ ಗೋವಾಕ್ಕೆ ಕರೆತಂದಿದ್ದಾರೆ. ಅಪರಿಚಿತ ವ್ಯಕ್ತಿ ಬಾಲಕಿಯ ಅಪಹರಣ ಮಾಡಿರುವ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಗೋವಾ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.