ಸುದ್ಧಿಕನ್ನಡ ವಾರ್ತೆ
Goa: ಗೋವಾದ ಆಶ್ವೆ ಮಾಂದ್ರೆಯಲ್ಲಿ ಬಾವಿಯಲ್ಲಿ ಬಿದ್ದಿದ್ದ ಕಾಡು ಹಂದಿಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂಧಿಗಳು ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಕುಡಚಡೆ ಎಂಬಲ್ಲಿ ನಾಲೆಯಲ್ಲಿ ಸಿಲುಕಿಕೊಂಡಿದ್ದ ಆಕಳನ್ನು ಬಜರಂಗ ದಳದ ಕಾರ್ಯಕರ್ತರು ರಕ್ಷಿಸಿದ್ದಾರೆ.

ಆಶ್ವೆ ಮಾಂದ್ರೆ ಎಂಬಲ್ಲಿ ಬಾವಿಯಲ್ಲಿ ಕಾಡು ಹಂದಿ ಬಿದ್ದಿದೆ ಎಂಬ ಮಾಹಿತಿ ಅರಣ್ಯ ಇಲಾಖೆ ಗಾರ್ಡ ಸಂದೀಪ ನಾರೊಜೆ ಎಂಬುವರಿಗೆ ಲಭ್ಯವಾಗಿತ್ತು. ನಾರೊಜೆ ರವರು ಅಗ್ನಿಶಾಮಕ ದಳದೊಂದಿಗೆ ತೆರಳಿ ಬಾವಿಯಲ್ಲಿ ಬಿದ್ದಿದ್ದ ಕಾಡುಹಂದಿಯನ್ನು ರಕ್ಷಿಸಿ ಮೇಲೆತ್ತಿದ್ದಾರೆ.

ಗೋವಾದ ಕುಡಚಡೆ ಎಂಬಲ್ಲಿ ನಾಲೆಯೊಂದರಲ್ಲಿ ಆಕಳು ಸಿಲುಕಿಕೊಂಡಿರುವ ಘಟನೆ ನಡೆದಿದೆ. ಬಜಂರಗ ದಳದ ಕಾರ್ಯಕರ್ತರು ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿ ರೀಕಿ ಹಳರ್ಣಕರ್, ಸುಮಿತ್ ನಾಯ್ಕ, ಸಂತೋಷ ಪರ್ವತ್ಕರ್ ರವರು ರಕ್ಷಣಾ ಕಾರ್ಯದಲ್ಲಿ ತೊಡಗಿ ಆಕಳನ್ನು ಸುರಕ್ಷಿತವಾಗಿ ನಾಲೆಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.