ಸುದ್ಧಿಕನ್ನಡ ವಾರ್ತೆ
ಕಾರವಾರ: ಜನವರಿ 13 ರಂದು ಕಾರವಾರದ ಪ್ರಸಿದ್ಧ ಕೂರ್ಮಗಡದ ಶ್ರೀ ನರಸಿಂಹ ದೇವರ ಜಾತ್ರಾ ಮಹೋತ್ಸವ ಜನವರಿ 13 ರಂದು ನಡೆಯಲಿದೆ. ಆದರೆ ಇದುವರೆಗೂ ಈ ಐಲ್ಯಾಂಡ್ ಗೆ ತೆರಳಲು ಜೆಟ್ಟಿ ನಿರ್ಮಾಣವಾಗದ ಕಾರಣ ಭಕ್ತರು ಪರದಾಡುವಂತಾಗಿದೆ.
2019 ರಲ್ಲಿ ಕೂರ್ಮಗಡ ಜಾತ್ರೆಗೆ ತೆರಳುವಾಗಿ ದೋಣಿ ಮುಳುಗಿ 16 ಜನ ಭಕ್ತಾದಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಆದರೂ ಕೂಡ ಜಿಲ್ಲಾಡಳಿತ ಹಾಗೂ ಸರ್ಕಾರ ಇದುವರೆಗೂ ಎಚ್ಚೆತ್ತುಕೊಂಡಿಲ್ಲ. ಜೆಟ್ಟಿ ನಿರ್ಮಾಣವಾಗದ ಕಾರಣ ಭಕ್ತರು ಪರದಾಡುವಂತಾಗಿದೆ.
ಭಕ್ತಾದಿಗಳ ಸುರಕ್ಷತೆಯ ದೃಷ್ಠಿಯಿಂದ ಕೂರ್ಮಗಢ ಸಮೀಪ ಜೆಟ್ಟಿ ನಿರ್ಮಿಸಲು 4 ವರ್ಷಗಳ ಹಿಂದೆ ಬಂದರು ಇಲಾಖೆಯಿಂದ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಇದುವರೆಗೂ ಜೆಟ್ಟಿ ನಿರ್ಮಾಣ ಪ್ರಸ್ತಾವನೆ ಅಪ್ರೂವಲ್ ಆಗದ ಕಾರಣ ಜಿಟ್ಟಿ ನಿರ್ಮಾಣವಾಗದೆಯೇ ಹಾಗೆಯೇ ಉಳಿದಿದೆ. ಜೆಟ್ಟಿ ನಿರ್ಮಾಣವಾಗಿದ್ದರೆ ಭಕ್ತರು ಕಾರವಾರ ಭಾಗದಿಂದ ಬೋಟ್ ಗಳ ಮೂಲಕ ನೇರವಾಗಿ ಕೂರ್ಮಗಢ ತಲುಪಬಹುದಿತ್ತು. ಆದರೆ ಇದುವರೆಗೂ ಜೆಟ್ಟಿ ನಿರ್ಮಾಣವಾಗದಿರೋದು ಭಕ್ತರು ಜಾತ್ರೆಗೆ ತೆರಳಲು ಪರದಾಡುವಂತಾಗಿದೆ.
ಜನವರಿ 13 ರಂದು ಕೂರ್ಮಗಢ ಶ್ರೀ ನರಸಿಂಹ ದೇವರ ಜಾತ್ರೆ ನಡೆಯಲಿದ್ದು, ಭಕ್ತಾದಿಗಳ ಸುರಕ್ಷತೆಯ ದೃಷ್ಠಿಯಿಂದ ಜಿಲ್ಲಾಡಳಿತ ಹಾಗೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.