ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಶ್ರೀಮಧ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ, ಶ್ರೀ ಗೋವರ್ಧನ ಗೋಶಾಲೆ ಕರಡೊಳ್ಳಿ ಯಲ್ಲಾಪುರ(ಉ.ಕ). ಗೋವಿಗಾಗಿ , ಶ್ರೀಗೋವಿಂದನ ಪ್ರೀತಿಗಾಗಿ ಗೋಪ್ರೇಮಿಗಳಿಂದ ಇದೇ ಜನವರಿ 11 ರಂದು ಶನಿವಾರ ಸಂಜೆ 5.30 ರಿಂದ ಕರಡೊಳ್ಳಿ ಗೋಶಾಲಾ ಆವರಣದಲ್ಲಿ “ಆಲೆಮನೆ ಹಬ್ಬ 2025” ಆಯೋಜಿಸಲಾಗಿದೆ.

ಗೋವರ್ಧನ ಗೋಶಾಲಾ ಆವರಣದಲ್ಲಿ ವಿಶೇಷ ಪೂಜೆ, ಸಾಂಸ್ಕøತಿಕ ಕಾರ್ಯಕ್ರಮ,. ಮತ್ತು ಆಲೆಮನೆ ಹಬ್ಬ ಆಯೋಜಿಸಲಾಗಿದೆ.ಸಂಜೆ 5 ಗಂಟೆಗೆ ಗೋಪೂಜೆ ಮೂಲಕ ಕಾರ್ಯಕ್ರಮ ಉಧ್ಘಾಟನೆ, ವಿಶೇಷ ಸಹಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ , ಸಾಯಂ ಸಂಧ್ಯೆಯ ಸೊಬಗಿನಲಿ ಗೋಮಾತೆಗೆ ಗಾಯನಮಜ್ಜನ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ತಿಳಿಸಲಾಗಿದೆ.