ಸುದ್ದಿಕನ್ನಡ ವಾರ್ತೆ
ಯಲ್ಲಾಪುರ: ಸೈಬರ್ ಅಪರಾಧಿಗಳು ಫೆಸ್ ಬುಕ್ ಖಾತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಹಲವು ಪ್ರಕರಣಗಳು ನಡೆಯುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನನಲ್ಲಿ ಹಲವರ ಫೇಸ್ ಬುಕ್ ಖಾತೆ ಹೈಕ್ ಅಥವಾ ನಕಲಿ ಖಾತೆ ಸೃಷ್ಠಿಯಾಗಿರುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿದೆ.
ನಕಲಿ ಖಾತೆ ಸೃಷ್ಠಿಯಾದಾಗ ಏನು ಮಾಡಬೇಕು…?
ಫೆಕ್ ಅಕೌಂಟ್ ಆದಾಗ ಅವರ ಖಾತೆಗೆ ಹೋಗಿ “ಇದು ನಕಲಿ ಖಾತೆ” ಎಂದು ರಿಪೋರ್ಟ ಮಾಡಬೇಕು. ಹೀಗೆ ಹತ್ತಾರು ಜನರ ಬಳಿಯೂ ಕೂಡ ರಿಪೋರ್ಟ ಆಯ್ಕೆ ಮಾಡಿ ಇದು ನಕಲಿ ಖಾತೆ ಎಂದು ಬರೆದಾಗ ಕೆಲವೇ ಗಂಟೆಗಳಲ್ಲಿ ನಕಲಿ ಫೇಸ್ ಬುಕ್ ಖಾತೆ ರದ್ದಾಗಲಿದೆ. ಯಲ್ಲಾಪುರದಲ್ಲಿಯೂ ಕೆಲವರ ನಕಲಿ ಫೇಸ್ ಬುಕ್ ಖಾತೆ ಸೃಷ್ಠಿಯಾದಾಗ ಇದೇ ಮಾರ್ಗ ಅನುಸರಿಸಿ ಆ ನಕಲಿ ಖಾತೆ ರದ್ಧಾಗಿರುವ ಉದಾಹರಣೆಯೂ ಇದೆ. ಇದರಿಂದ ಎಲ್ಲರೂ ಎಚ್ಚರ ವಹಿಸುವ ಅಗತ್ಯವಿದೆ.
ಯಲ್ಲಾಪುರದಲ್ಲಿ ಹಲವರ ಫೇಸ್ ಬುಕ್ ಖಾತೆ ಹ್ಯಾಕ್ ಆಗಿರುವ ಪ್ರಕರಣಗಳೂ ಇವೆ. ಇಂತಹ ಸಂದರ್ಭದಲ್ಲಿ ಇಂತಹ ವಿಧಾನ ಅನುಸರಿಸುವುದು ಮಾತ್ರವಲ್ಲದೆಯೇ ಸೈಬರ್ ಪೋಲಿಸರಿಗೆ ಮೊದಲು ದೂರು ಸಲ್ಲಿಸುವುದು ಬಹು ಮುಖ್ಯ.
ದಿ.ಜಗದೀಶ್ ನಾಯ್ಕ ರವರ ನಕಲಿ ಖಾತೆ…!
ಯಲ್ಲಾಪುರ ನ್ಯೂಸ್ ನ ಜಗದೀ± ನಾಯ್ಕ ರವರು ಸಾವನ್ನಪ್ಪಿ ಎರಡು ತಿಂಗಳೇ ಕಳೆದಿದೆ. ಆದರೆ ಇದೀಗ ಮೃತರ ಹೆಸರಿನಲ್ಲಿ ಇದೀಗ ಫೇಸ್ ಬುಕ್ ಖಾತೆ ತೆರೆಯಲಾಗಿದೆ. ಮೃತರ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವುದು ಮಾತ್ರವಲ್ಲದೆಯೇ ಅವರ ಹೆಸರಲ್ಲಿ ದಿ.ಜಗದೀಶ್ ನಾಯ್ಕ ರವರ ಬಳಿ ಹಣ ಕೇಳಲಾಗುತ್ತಿದೆ.
ಸೈಬರ್ ಅಪರಾಧಿಗಳು ದಿ. ಜಗದೀಶ್ ನಾಯ್ಕ ರವರ ಪೋಟೊವನ್ನು ಸಹ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜಗದೀಶ ನಾಯ್ಕ ರವರ ಅಸಲಿ ಖಾತೆಯಲ್ಲಿರುವ ಎಲ್ಲ ಸ್ನೇಹಿತರಿಗೆ ಸೈಬರ್ ಅಪರಾಧಿಗಳು ಮೆಸೇಜ್ ಮಾಡಿ ಹಣ ಕೇಳುತ್ತಿದ್ದಾರೆ. ಜಗದೀಶ್ ನಾಯ್ಕ ರವರ ನಕಲಿ ಖಾತೆಯಲ್ಲಿ 12 ಜನ ಸ್ನೇಹಿತರಿದ್ದಾರೆ.
ದಿ.ಜಗದೀಶ್ ನಾಯ್ಕ ರವರ ಫೇಸ್ ಬುಕ್ ಖಾತೆಗೆ ಬಾಬು ಸಾಗರ್ ಎಂಬುವವರು ಟ್ಯಾಗ್ ಮಾಡಿ ಈ ಕುರಿತಂತೆ ಎಲ್ಲ ಸ್ನೇಹಿತರಿಗೆ ವಿಷಯ ಮುಟ್ಟಿಸಿದ್ದಾರೆ.