ಸುದ್ಧಿಕನ್ನಡ ವಾರ್ತೆ
Goa: ಕಳಸಾ-ಬಂಡೂರಿ ನಾಲೆಯ ಮೂಲಕ ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿದೆಯೇ ಎಂದು ಪರಿಶೀಲನೆ ನಡೆಸಲು ಗೋವಾ ವಿಧಾನಸಭಾ ಸಭಾಗೃಹ ಸಮೀತಿ ನೇರವಾಗಿ ಸ್ಥಳಕ್ಕೆ ಭೇಟಿ ನೀಡುವ ನಿರ್ಣಯ ತೆಗೆದುಕೊಂಡಿದೆ.

ಗೋವಾ ರಾಜ್ಯ ಜಲಸಂಪನ್ಮೂಲ ಸಚಿವ ಹಾಗೂ ಸಭಾಗೃಹ ಸಮೀತಿಯ ಅಧ್ಯಕ್ಷ ಸುಭಾಷ ಶಿರೋಡಕರ್ ರವರ ಅಧ್ಯಕ್ಷತೆಯಲ್ಲಿ ಎರಡು ವರ್ಷಗಳ ನಂತರ ಇದೀಗ ಬೈಠಕ್ ನಡೆದಿದೆ.

ಬೈಠಕ್ ನಂತರ ಸಮೀತಿಯ ಅಧ್ಯಕ್ಷ ಸುಭಾಷ ಶಿರೋಡಕರ್- ಈ ಸಮೀತಿಯು ಕಳಸಾ ಬಂಡೂರಿ ಯೋಜನೆಯ ಪರಿಶೀಲನೆ ನಡೆಸಲು ಕರ್ನಾಟಕದ ಬಳಿ ಪರವಾನಗಿ ಕೇಳಲು ಸಮೀತಿಯು ಒಮ್ಮತದ ನಿರ್ಣಯ ತೆಗೆದುಕೊಂಡಿದೆ. ಗೋವಾ ವಿಧಾನಸಭೆಯ ಸಭಾಪತಿ ರಮೇಶ ತವಡಕರ್ ರವರು ಕರ್ನಾಟಕ ವಿಧಾನಸಭಾ ಅಧ್ಯಕ್ಷರ ಬಳಿ ಪರವಾನಗಿ ಪಡೆಯಲು ಸಂಪರ್ಕ ಸಾಧಿಸುವ ಕುರಿತು ವಿನಂತಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ.