ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯ ಸರ್ಕಾರವು ಮಹದಾಯಿ ನದಿ ನೀರು ಉಳಿಸಿಕೊಳ್ಳಲು ಗಂಭೀರವಾಗಿ ವಿಚಾರ ಮಾಡುವ ಅಗತ್ಯವಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ಪದೆ ಪದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿ ಈ ಪ್ರಕರಣದಲ್ಲಿ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಗೋವಾ ಸರ್ಕಾರವು ಈ ನಿಟ್ಟಿನಲ್ಲಿ ಇದುವರೆಗೂ ಗಂಭೀರವಾಗಿ ವಿಚಾರ ಮಾಡಿಲ್ಲ ಎಂದು ಗೋವಾದ ಪರಿಸರ ಹೋರಾಟಗಾರ ಹಾಗೂ ಲೇಖಕ ರಾಜೇಂದ್ರ ಕೇರಕರ್ ನುಡಿದರು.
ಮಹದಾಯಿ ನದಿ ನೀರು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಂದ್ರ ಕೇರಕರ್ ಸುದ್ಧಿಗಾರರೊಂದಿಗೆ ಮಾತನಾಡಿ- ರಾಜ್ಯ ಸರ್ಕಾರವು ಸ್ಥಾಪಿಸಿರುವ ಮಹದಾಯಿ ಸಮೀತಿಯು ಕಣಕುಂಬಿಗೆ ತೆರಳಿ ಮಹದಾಯಿ ನದಿಯ ಪರಿಶೀಲನೆ ನಡೆಸಬೇಕು. ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ಈ ಮೂರು ರಾಜ್ಯಗಳು ಮಹದಾಯಿ ಪ್ರಕರಣದಲ್ಲಿ ಸಲ್ಲಿಸಿದ್ದ ಯಾಚಿಕೆ ಸರ್ವೋಚ್ಛ ನ್ಯಾಯಾಲಯದ ಇಂದ ಬರುವ ನಿರ್ಣಯದ ಪ್ರತೀಕ್ಷೆಯಲ್ಲಿದೆ. ಗೋವಾ ಸರ್ಕಾರವು ಈ ಪ್ರಕರಣಕ್ಕೆ ಕೋಟ್ಯಂತರ ರೂ ಖರ್ಚು ಮಾಡುತ್ತಿದೆ ಎಂದು ರಾಜೇಂದ್ರ ಕೇರಕರ್ ನುಡಿದರು.
ಕರ್ನಾಟಕ ಸರ್ಕಾರವು ಮಹದಾಯಿ ಕುರಿತಂತೆ ತನ್ನ ಮಾರ್ಗವನ್ನು ಸುಗಮವಾಗಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಕರ್ನಾಟಕ ರಾಜ್ಯವು ಕಳಸಾ ಬಂಡೂರಿ ನಾಲೆಯ ಮೂಲಕ ಮಹದಾಯಿ ನೀರನ್ನು ತಿರುಗಿಸಿಕೊಂಡಿದ್ದರೂ ಕೂಡ ಗೋವಾ ರಾಜ್ಯ ಸರ್ಕಾರ ಈ ಕುರಿತು ಧ್ವನಿಯೆತ್ತುವ ಪ್ರಯತ್ನವನ್ನೂ ಮಾಡಿಲ್ಲ ಎಂದು ರಾಜೇಂದ್ರ ಕೇರಕರ್ ಆರೋಪಿಸಿದರು.
ಗೋವಾ ರಾಜ್ಯ ಸರ್ಕಾರವು ಮಹದಾಯಿ ಪ್ರಕರಣವನ್ನು ಗಂಭೀಋವಾಗಿ ತೆಗೆದುಕೊಳ್ಳಬೇಕು. ರಾಜ್ಯ ಜಲಸಂಪನ್ಮೂಲ ಇಲಾಖೆಯ ಮಂತ್ರಿ ಸುಭಾಷ್ ಶಿರೋಡಕರ್ ರವರ ಅಧ್ಯಕ್ಷತೆಯಲ್ಲಿ ನಿಯುಕ್ತಿಗೊಂಡ ಸಮೀತಿ ಇದುವರೆಗೂ ಕೇವಲ ಒಂದು ಬೈಠಕ್ ಮಾತ್ರ ನಡೆಸಿದೆ ಎಂದು ರಾಜೇಂದ್ರ ಶಿರೋಡಕರ್ ನುಡಿದರು.