ಸುದ್ಧಿಕನ್ನಡ ವಾರ್ತೆ
Goa: ಗೋವಾ ಸ್ಮಾರ್ಟ ಸಿಟಿ ಪಣಜಿಯಲ್ಲಿ ಏನು ನಡೆಯುತ್ತಿದೆ…? ಪಣಜಿ ಪರಿಸರದಲ್ಲಿ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಆತಂಕಕಾರಿ ವಿಷಯ ಬೆಳಕಿಗೆ ಬಂದಿತ್ತು. ಪಣಜಿ ಪರಿಸರದ ಕಾಕುಲೊ ಮೊಲ್ ಬಳಿ ಗಾಂಜಾ ಗಿಡ ಪತ್ತೆಯಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಪಣಜಿಯಲ್ಲಿ ಇದೇ ರೀತಿ ಸಾಂತನೇಜ್ ಪರಿಸರದಲ್ಲಿ ಗಾಂಜಾ ಗಿಡ ಪತ್ತೆಯಾಗಿದೆ.

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಪತ್ತೆಯಾಗಿದ್ದ ಗಾಂಜಾ ಗಿಡವನ್ನು ಮಾದಕ ಪದಾರ್ಥ ನಿಗ್ರಹ ದಳ ಪರಿಶೀಲನೆ ನಡೆಸಿ ಆ ಗಿಡವನ್ನು ವಷಕ್ಕೆ ಪಡೆದಿತ್ತು. ಆದರೆ ಇದೀಗ ಮತ್ತೊಂದೆಡೆ ಗಾಂಜಾ ಗಿಡ ಪತ್ತೆಯಾಗಿರುವುದು ಮತ್ತೆ ಪ್ರಶ್ನೆ ಹುಟ್ಟುಹಾಕಿದೆ. ಗಾಂಜಾ ಗಿಡವನ್ನು ತಂದು ನೆಡಬೇಕು ಅಥವಾ ಬೀಜವನ್ನು ಹಾಕಿದಾಗ ಮಾತ್ರ ಗಾಂಜಾ ಗಿಡ ಬೆಳೆಯಲು ಸಾಧ್ಯ. ಆದರೆ ಇಲ್ಲಿ ಹೇಗೆ ಗಾಂಜಾ ಗಿಡ ಬಂತು ಎಂಬ ಕುರಿತು ಎಂಬ ಪ್ರಶ್ನೆ ಮೂಡಿದೆ.