ಕಾರವಾರ: ಆ.18: ಅಂಚೆ ಇಲಾಖೆ ವತಿಯಿಂದ ವಿದ್ಯಾರ್ಥಿಗಳಲ್ಲಿ ಫಿಲಾಟೆಲಿ (ಅಂಚೆ ಚೀಟಿ ಸಂಗ್ರಹಣೆ) ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ದೀನ್ ದಯಾಳ್ ಸ್ಪರ್ಶ್ ಯೋಜನೆ ಸ್ಕಾಲರ್ಶಿಪ್ಗಾಗಿ 6 ರಿಂದ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ .
2023-24ನೇ ಸಾಲಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 60 ಕ್ಕಿಂತ ಅಧಿಕ ಅಂಕಗಳಿಸಿ ಫಿಲಾಟಲಿ ಖಾತೆ ಅಥವಾ ಶಾಲಾ ಫಿಲಾಟೆಲಿ ಸದಸ್ಯರಾಗಿರುವ ವಿದ್ಯಾರ್ಥಿಗಳು ಸೆಪ್ಟೆಂಬರ್ 3ನೇ ತಾರೀಕಿನ ಮೊದಲು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ವೆಬ್ಸೈಟ್ ವಿಳಾಸ: www.karnatakapost.gov.in ಅಥವಾ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾರವಾರ ಅಂಚೆ ವಿಭಾಗದ ಅಂಚೆ ಆಧೀಕ್ಷಕರಾದ ಶ್ರೀ ಧನಂಜಯ ಆಚಾರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆ ಚೀಟಿ ಸಂಗ್ರಹ; ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
