ಸುದ್ಧಿಕನ್ನಡ ವಾರ್ತೆ
ಶಿರಸಿ: ಯಕ್ಷಗಾನದ ಪ್ರಸಿದ್ಧ ಭಾಗವತ, ಗುರು ಸಾಗರಸ ಇಡುವಾಣಿಯ ತೃಯಂಬಕ ಹೆಗಡೆ ಅವರಿಗೆ ಇಲ್ಲಿನ ಪ್ರೋ.ಎಂ.ರಮೇಶ ಪ್ರಶಸ್ತಿ ಸಮಿತಿ ನೀಡುವ ಎಂ.ರಮೇಶ ಪ್ರಶಸ್ತಿ ಪ್ರಕಟಿಸಿದೆ.
೧೯೮೩ರಿಂದ ಯಕ್ಷಗಾನ ಭಾಗವತಿಕೆ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ತೃಯಂಬಕ ಹೆಗಡೆ ಅವರು ಅನೇಕ ಮೇಳ, ತಾಳಮದ್ದಲೆ ಕೂಟದಲ್ಲೂ ನಿರಂತರವಾಗಿ ಕಲಾ ಸೇವೆ ಸಲ್ಲಿಸಿದವರು. ನಾಡು, ಹೊರ ನಾಡು, ಹೊರ ದೇಶದಲ್ಲೂ ಯಕ್ಷಗಾನದ ಮೂಲಕ ಕನ್ನಡದ ಕಲೆಯ ಸುಧೆ ಹರಿಸಿದವರು. ಅನೇಕ ಹಿರಿ ಕಿರಿಯ ಕಲಾವಿದರನ್ನು ರಂಗದಲ್ಲಿ ಕುಣಿಸಿದವರು. ಅವರ ಸಮಗ್ರ ಕೊಡುಗೆ ಗಮನಿಸಿ ಈ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಸಮಿತಿ ಸ್ಥಾಪಕಿ ವಿಜಯನಳಿನಿ ರಮೇಶ ತಿಳಿಸಿದ್ದಾರೆ.
ಪ್ರಶಸ್ತಿಯು ೨೫ ಸಾವಿರ ರೂ. ನಗದು, ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದ್ದು, ಜನವರಿ ೫ರಂದು ನಯನ ಸಭಾಂಗಣದಲ್ಲಿ ಸಂಜೆ ೪ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ನೇತ್ರ ತಜ್ಞ ಡಾ. ಮೋಹನ ಹೊಸಬಾಳೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕೆರೆಮನೆ ಮೇಳದ ಸಂಚಾಲಕ,ಕಲಾವಿದ ಶಿವಾನಂದ ಹೆಗಡೆ ಅಧ್ಯಕ್ಷತೆವಹಿಸಿಕೊಳ್ಳಲಿದ್ದಾರೆ. ನಯನ ಫೌಂಡೇಶನ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದೆ ಎಂದು ವಿಜಯನಳಿನಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
————–
Sirsi: The Pro.M.Ramesh Award Committee here has announced the M.Ramesh Award to the famous bhagavata of Yakshagana, Guru Sagarasa Iduvaniya Tryambaka Hegade.
Triambaka Hegade, who made his debut in Yakshagana Bhagavatike Kshetra since 1983, has continuously rendered artistic services in many melas, talamaddale kootas. He spread the knowledge of Kannada art through Yakshagana in the country, outside the country and abroad. Many young and old artists have been introduced to the stage.
Vijayanalini Ramesh, founder of the committee, said that this award was announced in view of his comprehensive contribution.
The award is Rs 25 thousand. Cash, plaque, award certificate are included and the award ceremony will be held on January 5 at Nayana Hall at 4 pm. Ophthalmologist Dr. Mohan Hosabale will present the award, artist Sivananda Hegade, organizer of Keremane Mela, will preside. Vijayanalini said in the announcement that Nayana Foundation has supported the program.