Suddikannada news
Goa:  A 14-year-old minor girl who had gone to a party at a friend’s house on December 31 to celebrate New Year in Goa has been sexually assaulted. Old Goa police have arrested a 22-year-old youth in this case. The preliminary investigation conducted by the police revealed that this young man kidnapped and raped a minor girl.

According to the information available from the Oldagoa police- the minor girl who was raped had gone out for a party with her friends on December 31. But seeing the girl not coming home for some time, her relatives went to the Olsagoa police station and lodged a police complaint. The police registered a case regarding the disappearance of the girl and started the search. Then this girl was found with a young man.

After checking these two, it is clear that the girl was raped. The police have arrested the youth and have taken up further investigations.

 


ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಡಿಸೆಂಬರ್ 31 ರಂದು ಸ್ನೇಹಿತರ ಮನೆಗೆ ಪಾರ್ಟಿಗೆ ತೆರಳಿದ್ದ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಓಲ್ಡ ಗೋವಾ ಪೋಲಿಸರು 22 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಈ ಯುವಕನು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವುದು ಪೋಲಿಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಓಲ್ಡಗೋವಾ ಪೋಲಿಸರಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ- ಅತ್ಯಾಚಾರಕ್ಕೊಳಗಾಗಿರುವ ಅಪ್ರಾಪ್ತ ಬಾಲಕಿಯು ಡಿಸೆಂಬರ್ 31 ರಂದು ಸ್ನೇಹಿತರೊಂದಿಗೆ ಪಾರ್ಟಿಗಾಗಿ ಮನೆಯಿಂದ ಹೊರಗೆ ಹೋಗಿದ್ದಳು. ಆದರೆ ಬಾಲಕಿಯು ಎಷ್ಟುಹೊತ್ತಾದರೂ ಮನೆಗೆ ಬಾರದೇ ಇರುವುದನ್ನು ಕಂಡ ಆಕೆಯ ಸಂಬಂಧಿಕರು ಓಲ್ಸಗೋವಾ ಪೋಲಿಸ್ ಠಾಣೆಗೆ ತೆರಳಿ ಪೋಲಿಸ್ ದೂರು ದಾಖಲಿಸಿದರು. ಬಾಲಕಿ ನಾಪತ್ತೆಯಾಗಿರುವ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಶೋಧ ಕಾರ್ಯ ಕೈಗೆತ್ತಿಕೊಂಡಿದ್ದರು. ಆಗ ಈ ಬಾಲಕಿಯು ಒಬ್ಬ ಯುವಕನೊಂದಿಗೆ ಪತ್ತೆಯಾದಳು ಎನ್ನಲಾಗಿದೆ.

ಈ ಇಬ್ಬರ ತಪಾಸಣೆ ನಡೆಸಲಾಗಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಪೋಲಿಸರು ಯುವಕನನ್ನು ಬಂಧಿಸಿದ್ದು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.