Suddhikannada news
PANAJI: New Year was welcomed in Goa with grandeur in the presence of foreign tourists. Many tourists from home and abroad are currently in Goa.
The video of many tourists has gone viral on social media. A video of tourists having fun sitting on top of a car in Moraji Pedne area of Goa is making a lot of noise.
For many tourists in Goa, the New Year celebrations are still not over. A video of a tourist sitting on the top of a car and having fun in a running car has gone viral on social networking sites and objections are being raised on social media about such unruly behavior.
ಪಣಜಿ: ಗೋವಾದಲ್ಲಿ ಹೊಸ ವರ್ಷವನ್ನು ದೇಶ ವಿದೇಶಿಯ ಪ್ರವಾಸಿಗರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ದೇಶ ವಿದೇಶಗಳಿಂದ ಆಗಮಿಸಿರುವ ಹಲವು ಪ್ರವಾಸಿಗರು ಸದ್ಯ ಗೋವಾದಲ್ಲಿದ್ದಾರೆ. ಹಲವು ಜನ ಪ್ರವಾಸಿಗರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಗೋವಾದ ಮೋರಜಿ ಪೆಡ್ನೆ ಭಾಗದಲ್ಲಿ ಪ್ರವಾಸಿಗರು ಕಾರಿನ ಟಾಪ್ ಮೇಲೆ ಕುಳಿತು ಮಸ್ತಿ ಮಾಡುತ್ತ ತೆರಳುತ್ತಿರುವ ವೀಡಿಯೊ ಭಾರಿ ಸದ್ದು ಮಾಡುತ್ತಿದೆ.
ಗೋವಾದಲ್ಲಿರುವ ಹಲವು ಪ್ರವಾಸಿಗರಿಗೆ ಇನ್ನೂ ಹೊಸ ವರ್ಷದ ಸಂಭ್ರಮಾಚರಣೆ ಮುಗಿದಂತೆ ಕಂಡುಬರುತ್ತಿಲ್ಲ. ಕಾರಿನ ಟಾಪ್ ಮೇಲೆ ಕುಳಿತು ಓಡುತ್ತಿರುವ ಕಾರಿನಲ್ಲಿ ಮಸ್ತಿ ಮಾಡುತ್ತಿರುವ ಪ್ರವಾಸಿಗರ ವೀಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ವೈರಲ್ ಆಗಿದ್ದು ಇಂತಹ ಅಶಿಸ್ತಿನ ವರ್ತನೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.