ಸುದ್ಧಿಕನ್ನಡ ವಾರ್ತೆ
OLD GOA; ಓಲ್ಡಗೋವಾದಲ್ಲಿ ನಡೆಯುತ್ತಿರುವ ಸಂತ ಫ್ರಾನ್ಸಿಸ್ ಜೇವಿಯರ್ ಶವದರ್ಶನ ಕಾರ್ಯಕ್ರಮದಲ್ಲಿ ಇದುವರೆಗೂ 70 ಲಕ್ಷ ಜನ ಭಕ್ತಾದಿಗಳು ದರ್ಶನ ಪಡೆದುಕೊಂಡಿದ್ದಾರೆ. ಈ ಸಂಖ್ಯೆ 80 ಲಕ್ಷದ ವರೆಗೆ ತಲುಪುವ ಸಾಧ್ಯತೆಯಿದೆ ಎಂದು ಈ ಸಮಾರಂಭದ ಉಪಾಧ್ಯಕ್ಷ ಹಾಗೂ ಸಚಿವ ಅಲೆಕ್ಸ ಸಿಕ್ಕೆರಾ ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ದರ್ಶನದ ಸಮಯವನ್ನು ಇನ್ನೂ ಎರಡು ಗಂಟೆಗಳ ಕಾಲ ಹೆಚ್ಚಳ ಮಾಡಲಾಗಿದೆ. (70 lakh devotees have received darshan of Saint Francis Xavier in Old goa so far).

ಓಲ್ಡಗೋವಾ ಚರ್ಚ ನಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಸಂತ ಫ್ರಾನ್ಸಿಸ್ ಜೇವಿಯರ್ ರವರ ಶವದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರ, ಪ್ರಸಕ್ತ ಬಾರಿ ಕಳೆದ ನವೆಂಬರ್ 21 ರಿಂದ ಆರಂಭಗೊಂಡಿದೆ. ಶವದರ್ಶನ ಕಾರ್ಯಕ್ರಮ ಆರಂಭಗೊಂಡಾಗಿನಿಂದಲೂ ಪ್ರತಿದಿನ ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಲೇ ಇದ್ದಾರೆ. ಇದುವರೆಗೂ 70 ಲಕ್ಷ ಜನ ಭಕ್ತಾದಿಗಳು ಸಂತ ಫ್ರಾನ್ಸಿಸ್ ರವರ ದರ್ಶನ ಪಡೆದುಕೊಂಡಿದ್ದಾರೆ. ಇನ್ನು ನಾಲ್ಕು ದಿನ ಮಾತ್ರ ಬಾಕಿ ಉಳಿದಿದ್ದು ಅಲ್ಲಿಯವರೆಗೆ ಒಟ್ಟೂ 70 ಲಕ್ಷ ಜನ ಭಕ್ತಾದಿಗಳು ದರ್ಶನ ಪಡೆದುಕೊಂಡಿದ್ದು ಇನ್ನೂ ನಾಲ್ಕು ದಿನಗಳಲ್ಲಿ ಈ ಸಂಖ್ಯೆ 80 ಲಕ್ಷಕ್ಕೆ ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ.