ಸುದ್ಧಿಕನ್ನಡ ವಾರ್ತೆ
Goa: ನಮ್ಮ ದಿನನಿತ್ಯದ ಊಟದಲ್ಲಿ ಪ್ರಮುಖ ಭಾಗ ತೆಂಗಿನಕಾಯಿ. ತೆಂಗಿಕಾಯಿ ಬೆಲೆ ಗೋವಾದಲ್ಲಿ ಸದ್ಯ ಭಾರಿ ಏರಿಕೆಯಾಗಿದೆ. ಪಣಜಿ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಪ್ರತಿ ಕಾಯಿಗೆ 40 ರಿಂದ 45 ರೂ. ದರದಲ್ಲಿ ಮಾರಾಟಮಾಡಲಾಗುತ್ತಿದೆ. (40 to 45 per piece of medium size Coconut in the Goa market. Selling at price)
ಮಾರುಕಟ್ಟೆಗೆ ಕೊಬ್ಬರಿ ಆವಕ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯನ್ನು ವರ್ತಕರು ವ್ಯಕ್ತಪಡಿಸಿದ್ದಾರೆ. ಗೋವಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಹಾರದಲ್ಲಿ ತೆಂಗಿನಕಾಯಿ ಬಳಕೆ ಮಾಡಲಾಗುತ್ತಿದೆ. ಗೋವಾದಲ್ಲಿ ಕಳೆದ ಹಲವು ದಿನಗಳಿಂದ ತೆಂಗಿನಕಾಯಿ ದರ ಏರಿಕೆಯಾಗುತ್ತಲೇ ಇದೆ.
ಸದ್ಯ ಗೋವಾದಲ್ಲಿ ಮಧ್ಯಮಗಾತ್ರದ ತೆಂಗಿನಕಾಯಿ 40 ರಿಂದ 45 ರೂ ದರದಲ್ಲಿ ಮಾರಾಟಮಾಡಲಾಗುತ್ತಿದೆ. ಗೋವಾಕ್ಕೆ ಪ್ರಮುಖವಾಗಿ ಕರ್ನಾಟಕದಿಂದ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿ ಪೂರೈಕೆಯಾಗುತ್ತದೆ.