ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ತಾಲೂಕಿನ
ರಾಷ್ಟ್ರೀಯ ಹೆದ್ದಾರಿ ೬೩ ಮೇಲೆ ಪಟ್ಟಣದ ಬಿಸಗೋಡಕ್ರಾಸ್ ಬಳಿ ಬಸ್ಸ್ ಬೈಕಿಗೆ ಡಿಕ್ಕಿ ಹೊಡಿದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಒಬ್ಬ ಗಂಭೀರ ಗಾಯಗೊಂಡಿದ್ದಾನೆ.

ಉದ್ಯಮನಗರ ನಿವಾಸಿ ಕಸ್ತೂರಿ ಬಸವರಾಜ ಬ್ಯಾಡಗಿ( ೪೫) ಹಾಗೂ ಕೋಮಲ ಶಾಮ‌್ ಬೋವಿವಡ್ಡರ್ (೧೨) ಮೃತಪಟ್ಟವರಾಗಿದ್ದಾರೆ. ಬಸವರಾಜ ಹನುಮಂತಪ್ಪ ಬ್ಯಾಡಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಒಯ್ಯಲಾಗಿದೆ.

ಶನಿವಾರ ರಾತ್ರಿ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ಸಿನ ಆರೋಪಿತ ಬಸ್ ಚಾಲಕ ಸಂಗಯ್ಯ ಗುರುಪಾದಯ್ಯ ದೊಡವಾಡ ಕಲಘಟಗಿ ಈತ ಅತಿವೇಗ ಹಾಗೂ ನಿರ್ಲಕ್ಷಿತವಾಗಿ ಬಸ್ ಚಲಿಸಿಕೊಂಡು ಬಂದು,ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬೈಕ್ ಹಿಂಬದಿಗೆ ಕುಳಿತ ಕಸ್ತೂರಿ ಹಾಗೂ ಕೋಮಲ ಎಂಬರಿಗೆ ಬಸ್ ನ‌ ಹಿಂಬದಿಯ ಟೈಯರ್ ತಲೆಯಮೇಲೆ ಹರಿದು ಮೆದುಳು ಹೊರಬಂದು ಸ್ಥಳದಲ್ಲೇ ಮೃತರಾಗಿದ್ದಾರೆ. ಬೈಕ ಸವಾರನ ಬಲಕೈ,ಬಲಗಾಲಿಗೆ ಗಂಭೀರ ಗಾಯವಾಗಿದೆ.ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.