ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಮಾಡುವ ವಿಶಿಷ್ಟ ಸಾಧನೆ ಆ ಕ್ಷೇತ್ರದ ಕಡೆಗೆ ಇನ್ನಷ್ಟು ಜನರನ್ನು ಆಕರ್ಷಿಸುವಂತೆ ಮಾಡುತ್ತದೆ.
ಶ್ರೀ ವಿಘ್ನೇಶ್ವರ ನಾರಾಯಣ ಭಟ್ಟ, ಹೊಸ್ತೋಟ (ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಲವಳ್ಳಿ ಊರಿನ ) ಇವರು ಕೃಷಿ-ತೋಟಗಾರಿಕಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.
ಅಡಿಕೆ, ಕಾಳುಮೆಣಸು, ಏಲಕ್ಕಿ, ವೆನಿಲ್ಲಾ,, ಬಾಳೆ, ಶುಂಠಿ, ಜೇನುಕೃಷಿ, ಹೈನುಗಾರಿಕೆ, ತೋಟದ ನಿರ್ವಹಣೆ ಇನ್ನಿತರ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಮಾಡಿದ ಅನುಭವಿಗಳು. ಅಲ್ಲದೇ ಹಾಲು ಉತ್ಪಾದಕರ ಸಹಕಾರಿ ಸಂಘ,ಮಲವಳ್ಳಿ ಇದರ ಅಧ್ಯಕ್ಷರಾಗಿ, ಭಾರತೀಯ ಕಿಸಾನ್ ಸಂಘದ ಯಲ್ಲಾಪುರ ತಾಲೂಕಾ ಅಧ್ಯಕ್ಷರಾಗಿ ರೈತರ ಮತ್ತು ಕೃಷಿಕ್ಷೇತ್ರದ ಏಳ್ಗೆಗೆ ಶ್ರಮಿಸುತ್ತಿದ್ದಾರೆ.
ಅನೇಕ ಯುವ ಕೃಷಿಕರಿಗೆ ಮಾರ್ಗದರ್ಶಕರಾಗಿದ್ದಾರೆ. ಮತ್ತು ಈಗಾಗಲೇ ಅನೇಕ ಗೌರವ ಸನ್ಮಾನಗಳಿಗೂ ಭಾಜನರಾಗಿದ್ದಾರೆ.
ಶ್ರೀ ವಿಘ್ನೇಶ್ವರ ನಾರಾಯಣ ಭಟ್ಟ, ಹೊಸ್ತೋಟ ಇವರಿಗೆ ಬೆಂಗಳೂರಿನಲ್ಲಿ ಜರುಗಿದ
*ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಕೃಷಿರತ್ನ ಪ್ರಶಸ್ತಿ* ನೀಡಿ ಗೌರವಿಸಿರುವುದು ಅತ್ಯಂತ ಸಂತಸ ತಂದಿದೆ.
ಈ ಸಮ್ಮಾನ ಇನ್ನಷ್ಟು ಸಾಧನೆಗೆ, ಸಮಾಜಮುಖಿ ಕಾರ್ಯಗಳಿಗೆ ಸ್ಪೂರ್ತಿಯಾಗಲಿ, ಗೌರವಗಳು ಅರಸಿಬರಲಿ ಎಂದು ಸುದ್ದಿ ಕನ್ನಡ ವಾರ್ತೆ ಬಳಗ ಅಭಿನಂದಿಸುತ್ತದೆ