ಸುದ್ಧಿಕನ್ನಡ ವಾರ್ತೆ
Goa: ಗೋವಾದ ವಾಸ್ಕೊ ಜವಾರಿನಗರದಲ್ಲಿರುವ ಶ್ರೀ ಸಧ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಶಾಖಾ ಮಠದಲ್ಲಿ 36 ನೇಯ ಪುಣ್ಯ ದರ್ಶನ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವ ಡಿಸೆಂಬರ್ 21 ರಿಂದ ಆರಣಭಗೊಂಡಿದ್ದು ಡಿಸೆಂಬರ್ 25 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಅತ್ಯಂತ ವಿಜ್ರಂಭಣೆಯಿಂದ ನಡೆದಿದೆ.

ಪರಮ ಪೂಜ್ಯ ಶ್ರೀ ಡಾ.ಮುರುಘರಾಜೇಂದ್ರ ಮಹಾದ್ವಾಮಿಗಳ ಆಶೀರ್ವಚನ ಹಾಗೂ ಶ್ರೀಗಳ ತುಲಾಭಾರ ಕಾರ್ಯಕ್ರಮ ಕೂಡ ಜರುಗಿತು. ಗೋವಾ ಹಾಗೂ ಕರ್ನಾಟಕದ ವಿವಿದೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ತುಲಾಭಾರ ಕಾರ್ಯಕ್ರಮದಲ್ಲಿ ದೇವಸ್ಥಾನ ಸಮೀತಿಯ ಪ್ರಮುಖರಾದ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಉಪಸ್ಥಿತರಿದ್ದು ಶ್ರೀಗಳ ಪೂಜಾಕೈಂಕರ್ಯಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗಣ್ಯಾತಿಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿದಿನ ಭಜನೆ, ಕೀರ್ತನೆ, ಸೇರಿದಂತೆ ವಿಇಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಪ್ರತಿದಿನ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ಅನ್ನಪ್ರಸಾದದ ವ್ಯವಸ್ಥೆ ಕಲ್ಪಿಸಾಗಿತ್ತು. ಸಂಜೆ ನಾಟಕ ಪ್ರದರ್ಶನ ಕೂಡ ನಡೆಯಿತು.