ಸುದ್ಧಿಕನ್ನಡ ವಾರ್ತೆ
ಬೆಂಗಳೂರು: ಇದೀಗ ವಿಪರೀತ ಚಳಿಯ ನಡುವೆಯೂ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆ ಮುಂದುವರೆದಿದೆ. ಮುಂದಿನ 7 ದಿನಗಳ ಕಾಲ ದೇಶದ ಹಲವು ರಾಜ್ಯಗಳಲ್ಲಿ ಮಳೆ ಮುಂದುವರೆಯಲಿರುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

  ಕರ್ನಾಟಕದ ವಿವಿದೆಡೆ ಮಳೆ...
ಕರ್ನಾಟಕದ ವಿವಿದೆಡೆ ಇಂದಿನಿಂದ ಡಿಸೆಂಬರ್ 28 ರವರೆಗೆ ಕಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ, ಬಾಗಲಕೋಟೆ,ಬೆಳಗಾವಿ, ಧಾರವಾಡ,ಗದಗ,ಹಾವೇರಿ, ಚಾಮರಾಜನಗರ,ಚಿಕ್ಕಬಳ್ಳಾಪುರ,ಮೈಸೂರು, ಶಿವಮೊಗ್ಗ,ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. 

ದೇಶಾದ್ಯಂತ ಸದ್ಯ ಭಾರಿ ಚಳಿ ಮುಂದುವರೆದಿದೆ. ಉತ್ತರಭಾರತದಲ್ಲಂತೂ ಮಂಜಿನ ನಡುವೆ ಚಳಿಯ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಡಿಸೆಂಬೆರ್ 28 ರ ವರೆಗೆ ಅರಬ್ಬೀ ಸಮುದ್ರ ಮತ್ತು ಬಳಗಾಳಕೊಲ್ಲಿಯಲ್ಲಿ ಚಂಡಮಾರುತದ ಅಲೆಗಳು ತೀವ್ರಗೊಳ್ಳುವ ಸಾಧ್ಯತೆಯಿದೆ. ಇದರ ಪರಿಣಾಮ ಡಿಸೆಂಬರ್ 26 ರ ರಾತ್ರಿಯಿಂದ ವಾಯುವ್ಯ ಭಾರತದ ಮೇಲೆ ಪರಿಣಾ ಬೀರುವ ಸಾಧ್ಯತೆಯಿದೆ. ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಚಳಿ ಹೆಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಡಿಸೆಂಬರ್ 25 ರವರೆಗೆ ನಾಗಾಲ್ಯಾಂಡ್, ಮೇಘಾಲಯ,ಆಸ್ಸಾಂ ನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.