ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ :ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಬಾಗಲಕೋಟದಿಂದ ಕೇರಳಕ್ಕೆ ಸಕ್ಕರೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ಬ್ರೇಕ್‌ ಲೈನರ್ ಹೀಟ್ ಆಗಿ,‌ಇದರಿಂದ‌ ಸ್ಪಾರ್ಕ ಅಗಿ ಬೆಂಕಿ ಹತ್ತಿಕೊಂಡು ಲಾರಿ ಧಗಧಗನೆ ಉರಿದು ಹೋದ ಘಟನೆ ಮಂಗಳವಾರ ಬೆಳಗಿನ ಜಾವನಡೆದಿದೆ.

 

ಬೆಂಕಿ ಗಮನಿಸಿದ ಚಾಲಕ ವರ್ಗೀಸ್ ಜೊಸೆಪ್ ಲಾರಿಯನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಕೆಳಗೆ ಇಳಿದಿದ್ದಾನೆ.ಕ್ಲೀನರ್ ಕೂಡಾ ಲಾರಿಯಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಲಾರಿಯ ಟೈರಗಳಿಗೆ ಬೆಂಕಿ ಹತ್ತಿಕೊಂಡು ಸಕ್ಕರೆ ಸಮೇತ ಸಂಪೂರ್ಣ‌ಸುಟ್ಟು ಹೋಗಿದೆ.

ಲಾರಿ ಹುಬ್ಬಳ್ಳಿಯ ಮೊಹಮ್ಮದ್ ರಫಿಕ್ ರವರಿಗೆ ಸೇರಿದ್ದೆಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ತಕ್ಷಣದಲ್ಲಿ ಪೋಲಿಸರು ಮತ್ತು
ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.