ಸುದ್ಧಕನ್ನಡ ವಾರ್ತೆ
Goa: ಗೋವಾದಲ್ಲಿ ಭೂ ಕಬಳಿಕೆ ಪ್ರಕರದ ಆರೋಪಿ ಸುಲೇಮಾನ್ ನನ್ನು ಮತ್ತೆ ಸೆರೆ ಹಿಡಿಯಲು ಗೋವಾ ಪೋಲಿಸ್ ಹಾಗೂ ಗೋವಾ ಸರ್ಕಾರ ಪ್ರತಿಷ್ಠೆಯನ್ನು ಪಣಕ್ಕಿಟ್ಟಿತ್ತು. ಇದಕ್ಕಾಗಿ ವಿವಿಧ ತಂಡಗಳನ್ನು ಸುಲೇಮಾನ್ ಸೆರೆಗೆ ಕಳುಹಿಸಲಾಗಿತ್ತು. ಈ ತಂಡ್ಗಳಲ್ಲಿ ಸುಮಾರು 70 ಪೋಲಿಸರಿದ್ದರು ಎಂದು ಗೋವಾ ಪೋಲಿಸ್ ಮಹಾನಿರ್ದೇಶಕ ಅಶೋಕ ಕುಮಾರ್ ಮಾಹಿತಿ ನೀಡಿದ್ದಾರೆ. ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿರು.

ಕ್ರಿಮಿನಲ್ ಆಗಿರುವ ಸುಲೇಮಾನ್ ಈತ ದೇಶಾದ್ಯಂತ ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾನೆ. ಈತ ಪದೆ ಪದೇ ತನ್ನ ಸ್ಥಳ ಬದಲಾಯಿಸುತ್ತಿರುವುದನ್ನು ಪೋಲಿಸರು ಪತ್ತೆ ಮಾಡಿದ್ದರು. ಹೀಗಾಗಿ ಪೋಲಿಸರು ತಮ್ಮ ತಂತ್ರಗಾರಿಕೆಯನ್ನು ಬದಲಾಯಿಸುತ್ತಲೇ ಇದ್ದರು. ಈತ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಮಂಗಳೂರು, ಕಾರವಾರ, ಮುಂಬಯಿ, ಹುಬ್ಬಳ್ಳಿ, ಕೊಚ್ಚಿ, ಎರ್ನಾಕುಲಂಗೆ ತೆರಳಿದ್ದ. ಕೊನೆಗೆ ಸುಲೇಮಾನ್ ಗೆ ಆತನ ಕುಟುಂಬದವರು ಆಶ್ರಯ ನೀಡಿದ್ದಾರೆ. ಎಂಬ ಮಹತ್ವದ ಮಾಹಿತಿ ಪೋಲಿಸರಿಗೆ ಸಿಕ್ಕಿತ್ತು. ಈತನಿಗೆ ವಿವಿದೆಡೆ ಹಲವು ಮನೆಗಳಿವೆ. ಈತನ ಕುಟುಂಬ ಕೇರಳದ ಎರ್ನಾಕುಲಂ ನಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಗೋವಾ ಅಪರಾಧ ತಡೆ ವಿಭಾಗದ ಪೋಲಿಸರು ಕೇರಳ ಪೋಲಿಸರ ಸಹಾಯದಿಂದ ಎರ್ನಾಕುಲಂ ನಲ್ಲಿರುವ ಅವರ ಕುಟುಂಬದ ಮನೆಯ ಮೇಲೆ ಪೋಲಿಸರು ಧಾಳಿ ನಡೆಸಿದರು. ಅಲ್ಲಿ ಸುಲೇಮಾನ್ ಮತ್ತು ಆತನ ಪತ್ನಿ ಅಫ್ಸಾನಾ ಅಲಿಯಾಸ್ ಸಾರಿಕಾ ಕೂಡ ಪತ್ತೆಯಾಗಿದ್ದಾರೆ. ಇವರಿಬ್ಬರನ್ನೂ ಪೋಲಿಸರು ಬಂಧಿಸಿದ್ದಾರೆ. ಸುಲೇಮಾನ್ ನನ್ನು ಓಲ್ಡಗೋವಾ ಪೋಲಿಸ್ ಕಸ್ಟಡಿಯಲ್ಲಿ ಇರಿಸಲಾಗಿದ್ದು ಅಫ್ಸಾನಾ ರವರನ್ನು ಮಾಪ್ಸಾ ಪೋಲಿಸ್ ಕಸ್ಟಡಿಯಲ್ಲಿ ಇಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.