ಸುದ್ಧಿಕನ್ನಡ ವಾರ್ತೆ
Goa: ಸಂಸತ್ ಅಧಿವೇಶನದ ನಂತರ ಗೋವಾ ರಾಜ್ಯ ಮಂತ್ರಿಮಂಡಳದ ಪುನರ್ರಚನೆ ನಡೆಯಲಿದೆ ಎಂದು ಆರಂಭಗೊಂಡ ಚರ್ಚೆ ಗೋವಾದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವರೆಗೂ ಊಹಾಪೋಹಗಳು ಹರಡಿತ್ತು. ಇದಕ್ಕೆ ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಪೂರ್ಣ ವಿರಾಮ ನೀಡಿದ್ದಾರೆ. ಶಾಸಕ ಪ್ರವೀಣ ಅರ್ಲೆಕರ್ ರವರನ್ನು ಬಿಜೆಪಿ ವರಿಷ್ಠರು ದೆಹಲಿಕೆ ಬುಲಾವ್ ನೀಡಿಯೇ ಇಲ್ಲ ಎಂದು ಸದಾನಂದ ತಾನಾವಡೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವರು ಗೋವಾ ರಾಜ್ಯ ಮುಖ್ಯಮಂತ್ರಿ ಬದಲಾವಣೆಯ ಕುರಿತು ಕಲ್ಪನೆಯ ಪತಂಗ ಹಾರಿಸಿದ್ದರು. ಆದರೆ ಮುಖ್ಯಮಂತ್ರಿ ಬದಲಾವಣೆಯ ಕುರಿತು ಯಾವುದೇ ವಿಷಯವೂ ಇಲ್ಲ ಚರ್ಚೆಯೂ ನಡೆದಿಲ್ಲ. ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಸುಳ್ಳು ಸುದ್ಧಿ ಹರಡಿಸುತ್ತಿದ್ದಾರೆ. ಮಂತ್ರಿಮಂಡಳದಲ್ಲಿ ಕೆಲ ಬದವಾವಣೆಯಾಗಲಿದೆ ಎಂದು ಮುಖ್ಯಮಂತ್ರಿಗಳು ಹಾಗೂ ನಾನು ಕೂಡ ಹೇಳಿದ್ದೆ. ಆದರೆ ಇದರರ್ಥ ಈಗಲೇ ಮಂತ್ರಿಮಂಡಳದಲ್ಲಿ ಬದಲಾವಣೆಯಾಗಲಿದೆ ಎಂದಲ್ಲ ಎಂದು ಸದಾನಂದ ತಾನಾವಡೆ ನುಡಿದರು.
ಬಿಜೆಪಿ ವರಿಷ್ಠರು ದೆಹಲಿ ಹಾಗೂ ಬಿಹಾರದ ಚುನಾವಣಾ ಸಿದ್ಧತೆಯಲ್ಲಿದ್ದಾರೆ. ಗೋವಾ ವಿಷಯದ ಕುರಿತು ಅವರು ಯಾವುದೇ ಚರ್ಚೆ ನಡೆಸಿಲ್ಲ. ಮಂತ್ರಿಮಂಡಳದಲ್ಲಿ ಬದವಾವಣೆಯು ಮುಖ್ಯಮಂತ್ರಿಗಳ ಅಧಿಕಾರವಾಗಿದೆ.