ಸುದ್ಧಿಕನ್ನಡ ವಾರ್ತೆ
Goa : ಗೋವಾದಲ್ಲಿ ಭೂ ಕಬಳಿಕೆ ಪ್ರಕರಣದ ಪ್ರಮುಖ ಆರೋಪಿ ಸುಲೇಮಾನ್ ಈತನು ಪೋಲಿಸರ ಬಲೆಗೆ ಬಿದ್ದಿದ್ದಾನೆ. ಕಳೆದ ಎರಡು ದಿನಗಳ ಹಿಂದೆಯೇ ಪೋಲಿಸರು ಈತನನ್ನು ಬಂಧಿಸಿದ್ದು ಗೋವಾಕ್ಕೆ ಕರೆತರಲಾಗುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.

ಸುಲೇಮಾನ್ ಖಾನ್ ಈತನಿಗೆ ಪೋಲಿಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಅಮಿತ್ ನಾಯ್ಕ ಇವರ ಜಾಮೀನು ಪ್ರಕರಣ ಮತ್ತು ಸುಲೇಮಾನ್ ಖಾನ್ ಪರಾರಿಯಾಗಲು ಸರ್ಕಾರದ ಕೈವಾಡವಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ. ಇದೀಗ ಸುಲೇಮಾನ್ ಖಾನ್ ನನ್ನು ಬಂಧಿಸಿದ್ದು ಈತನನ್ನು ಗೋವಾಕ್ಕೆ ಕರೆತಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಸ್ಪಷ್ಟ ಉತ್ತರ ನೀಡಿದ್ದಾರೆ.

ಸುಲೇಮಾನ್ ಖಾನ್ ನನ್ನು ಕಳೆದ ಎರಡು ದಿನಗಳ ಹಿಂದೆಯೇ ಕೇರಳದಲ್ಲಿ ಬಂಧಿಸಲಾಗಿದ್ದು ಕೇರಳ ಸರ್ಕಾರದ ಕೆಲ ಕಾಗದ ಪತ್ರದ ಕೆಲಸ ಬಾಕಿ ಉಳಿದಿತ್ತು, ಇದಕ್ಕಾಗಿ ವಿಳಂಭವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.