ಸುದ್ಧಿಕನ್ನಡ ವಾರ್ತೆ
Goa : ಹೊಸ ವರ್ಷ ಸಂಭ್ರಮಾಚರಣೆಗೆ ಇನ್ನು ಕೆಲವೇದಿನ ಬಾಕಿ ಉಳಿದಿದೆ. ಗೋವಾದಲ್ಲಿ ಹೊಸ ವರ್ಷ ಸ್ವಾಗತಕ್ಕೆ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವರ್ಷಾಂತ್ಯಕ್ಕೆ ಗೋವಾದ ಎಲ್ಲ ಹೋಟೆಲ್ ರೂಂಗಳು ಮುಂಗಡವಾಗಿ ಕಾಯ್ದಿರಿಸಿರುವುದು ಕಂಡುಬರುತ್ತಿದೆ.

ಗೋವಾ ರಾಜ್ಯ ಒಂದು ಜಗತ್ಪ್ರಸಿದ್ಧ ಪ್ರಾಸಿ ತಾಣವಾಗಿದ್ದು ಪ್ರತಿದಿನ ದೇಶವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೊಸ ವರ್ಷ ಸಂಭ್ರಮಾಚರಣೆಗೆ ಇನ್ನೂ ಹೆಚ್ಚು ಒರವಾಸಿಗರು ಗೋವಾಕ್ಕೆ ಆಗಮಿಸುತ್ತಾರೆ. ಹೊಸ ವರ್ಷ ಸ್ವಾಗತಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ, ಆದರೆ ಈಗಾಗಲೇ ದೇಶ-ವಿದೇಶಿಯ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಿದ್ದಾರೆ.

ಹೊಸ ವರ್ಷ ಸಂಭ್ರಮಾಚರಣೆಗೆ ಗೋವಾದ ವಿವಿದೆಡೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಗೋವಾದ ವಿವಿಧ ಬೀಚ್ ಗಳು ಹೊಸ ವರ್ಷ ಸ್ವಾಗತಕ್ಕೆ ಸಿದ್ಧಗೊಳ್ಳುತ್ತಿವೆ. ವರ್ಷದಿಂದ ವರ್ಷಕ್ಕೆ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಪ್ರಸಕ್ತ ವರ್ಷವೂ ಕೂಡ ಇನ್ನೂ ಹೆಚ್ಚಿನ ಪ್ರವಾಸಿಗರು ಗೋವಾಕ್ಕೆ ಆಗಮಿಸುವ ನಿರೀಕ್ಷೆ ವ್ಯಕ್ತವಾಗುತ್ತಿದೆ.