ಸುದ್ಧಿಕನ್ನಡ ವಾರ್ತೆ
Goa: ಕಳೆದ ಸುಮಾರು 22 ವರ್ಷಗಳಿಂದ ಗೋವಾದ ಮಾಪ್ಸಾದ ಸೇಂಟ್ ಜೇವಿಯರ್ಸ ಉಚ್ಛ ಮಾಧ್ಯಮಿಕ ವಿದ್ಯಾಲಯದಲ್ಲಿ ಸಂಸ್ಕøತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಹಿರೀಯ ಉಪನ್ಯಾಸಕರಾದ ಮಹಾಬಲ ನಾಗೇಂದ್ರ ಭಟ್ ದಂಪತಿಗಳನ್ನು ಹಿರಿಯ ಪುರೋಹಿತರಾದ ನಾರಾಯಣ ಭಟ್ ದಂಪತಿಗಳು ಸನ್ಮಾನಿಸಿದರು.
ಗೋವಾದ ಮಾರ್ಶೆಲ್ ನ ಶ್ರೀ ಸಾಯಿಬಾಬಾ ಭಕ್ತ ಮಂದಿರದಲ್ಲಿ ಶನಿವಾರ ಮಧ್ಯಾನ್ಹ ಲಲಿತಾ ಭಜನಾ ಮಂಡಳಿ ಗೋವಾ ರವರು ನಡೆಸಿದ ಹಾಗೂ ಪುರೋಹಿತರಾದ ನಾರಾಯಣ ಭಟ್ ರವರು ಆಯೋಜಿಸಿದ್ದ ಭಗವಧ್ಗೀತಾ ಸಪ್ತಾಹದ ಸಮಾಪ್ತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಹಾಬಲ ಭಟ್ ರವರು ಕುಮಟಾ ತಾಲೂಕಿನ ಉಪ್ಪಿನ ಪಟ್ಟಣದವರು. ರವರು ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ ಗೋವಾ ವಲಯದ ಅಧ್ಯಕ್ಷರೂ ಆಗಿದ್ದು, ಸಂಸ್ಕೃತ ಭಾರತಿಯ ಕೊಂಕಣ ಪ್ರಾಂತ ವಿದ್ವತ್ ಪರಿಷತ್ ಸಂಯೋಜಕರೂ ಆಗಿದ್ದಾರೆ. ಇವರ ಸಂಸ್ಕøತದ ಎರಡು ಪುಸ್ತಕಗಳು ಪ್ರಕಾಶಿತವಾಗಿದೆ, ಇವರ ಸಾಧನೆಯನ್ನು ಗುರುತಿಸಿ ಮಹಾಬಲ ಭಟ್ ಮತ್ತು ಶರ್ವಾಣಿ ಭಟ್ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಹಿಂದೆ ಮಹಾಬಲ ಭಟ್ ರವರು ಗೋವಾ ಕನ್ನಡ ಸಮಾಜದ ಅಧ್ಯಕ್ಷರಾಗಿಯೂ ಕೂಡ ಹೊರನಾಡ ಗೋವೆಯಲ್ಲಿ ಕನ್ನಡದ ಸೇವೆ ಸಲ್ಲಿಸಿದವರು. ವಿವಿಧ ಕಾರ್ಯಕ್ರಮಗಳಲ್ಲಿಯೂ ಉಪನ್ಯಾಸ ಮಾಡುವ ಇವರು ಉತ್ತಮ ವಾಗ್ಮಿಗಳೂ ಆಗಿದ್ದಾರೆ.