ಸುದ್ಧಿಕನ್ನಡ ವಾರ್ತೆ
Goa: ಗೋವಾದ ಸತ್ತರಿ ತಾಲೂಕಿನ ಪರ್ಯೆಯ ಸಾಖಳೇಶ್ವರ ದೇವಸ್ಥಾನದ ಧಾರ್ಮಿಕ ವಿಧಿಗೆ ಸಂಬಂಧಿಸಿದಂತೆ ನಿರ್ಮಾಣಗೊಂಡಿದ್ದ ವಾದ ವಿವಾದ ತಾರಕಕ್ಕೇರಿದೆ. ಆಕ್ರಮಣಕಾರಿಯಾಗಿ ಕೆಲ ಗ್ರಾಮಸ್ಥರು ಶುಕ್ರವಾರ ರಾತ್ರಿ ರಸ್ತೆಗೆ ಇಳಿದು ಗದ್ಧಲ ಆರಂಭಿಸಿ ಮುಖ್ಯ ರಸ್ತೆಯನ್ನು ತಡೆಹಿಡಿದ ಘಟನೆ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಆಗಮಿಸಿದ್ದ ಪೋಲಿಸರ ಮೇಲೂ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.

ಲಭ್ಯವಾಗಿರುವ ಮಾಹಿತಿಯ ಅನುಸಾರ- ಶುಕ್ರವಾರ ತಡರಾತ್ರಿ ಗ್ರಾಮಸ್ಥರು ಆಕ್ರಮಣಕಾರಿಯಾಗಿ ರಸ್ತೆಗೆ ಇಳಿದಿದ್ದರು. ರಸ್ತೆಯಲ್ಲಿ ಟಾಯರ್ ಗೆ ಬೆಂಕಿ ಹಚ್ಚಿ ಮುಖ್ಯ ರಸ್ತೆಯನ್ನು ತಡೆಹೊಡಿದರು. ಈ ಘಟನೆಯ ಪರಿಸ್ಥಿತಿಯನ್ನು ನಿಯಂತ್ರಿಸಲು ಆಗಮಿಸಿದ್ದ ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ ಓರ್ವ ಪಿಎಸ್ ಐ ಗಾಯಗೊಂಡಿದ್ದಾರೆ.

ಈ ಗಲಾಟೆಯ ಸಂದರ್ಭದಲ್ಲಿ 500 ಕ್ಕೂ ಹೆಚ್ಚು ಜನರು ರಸ್ತೆಗೆ ಇಳಿದಿದ್ದರು. ರಸ್ತೆಯಲ್ಲಿ ಟಾಯರ್ ಗೆ ಬೆಂಕಿ ಹಚ್ಚಿ ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಲು ಆರಂಭಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಲುಪಿತ್ತು.

ಪರ್ಯೆ ಸತ್ತರಿ ತಾಲೂಕಿನ ಸಾಖಳೇಶ್ವರ ದೇವಸ್ಥಾನದ ವರ್ಧಂತಿ ಉತ್ಸವದಲ್ಲಿ ಒಂದು ಗುಂಪಿನಿಂದ ಧಾರ್ಮಿಕ ಕಾರ್ಯಕ್ರಮ ನಡೆಸಲಾಗಿದೆ ಎಂಬ ಕುರಿತಂತೆ ವಾದ ಸೃಷ್ಠಿಯಾಗಿತ್ತು. ವಾಳಪೈ ಉಪಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಗಾಂವಕರ್ ಗುಂಪು ಪ್ರತಿಭಟನೆಯನ್ನೂ ನಡೆಸಿತ್ತು. ಮುಂದಿನ ನಎರಡು ದಿನಗಳ ಕಾಲ ದೇವಸ್ಥಾನದ ಉತ್ಸವವನ್ನು ಬಂದ್ ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಭೂಮಿಕಾ ದೇವಸ್ಥಾನ ಡಿಸೆಂಬರ್ 24 ರ ವರೆಗೆ ಬಂದ್ ಮಾಡುವ ಕುರಿತಂತೆ ಉಪಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.