ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಕನ್ನಡ ಭವನಕ್ಕಾಗಿ ಇದ್ಧವರೆಲ್ಲ ತಾನು ಕೊಡುತ್ತೇನೆ, ತಾನು ಕೊಡುತ್ತೇನೆ ಎಂದು ಮುಂದೆ ಬಂದು ಕನ್ನಡ ಭವನಕ್ಕಾಗಿ ಸುಮಾರು 30 ಲಕ್ಷ ವಾಗ್ದಾನವಾಯಿತು. ಇದೇ ಸಂದರ್ಭದಲ್ಲಿ ಮಾಪ್ಸಾದ ಬಸವಂತಪ್ಪ ತಳವಾರ ಎಂಬುವರು ನಾನು ಬಾಡಿಗೆ ಮನೆಯಲ್ಲಿದ್ದರೇನು..? ನನ್ನ ಕನ್ನಡ ಭವನದ ಕನಸು ನನಸಾಗಬೇಕು ಎಂದು ಕನ್ನಡ ಭವನ ನಿರ್ಮಾಣಕ್ಕೆ 50,000 ರೂ ದೇಣಿಗೆ ವಾಗ್ದಾನ ನೀಡಿದ್ದ ಅಪ್ಪಟ ಕನ್ನಡ ಪ್ರೇಮಿ ತಳವಾರ ರವರು ಇನ್ನಿಲ್ಲವಾಗಿದ್ದಾರೆ, ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ (Hukkeri Swamiji) ನುಡಿದಿದ್ದಾರೆ.
ದಿ. ತಳವಾರ ರವರು ಗೋವಾದಲ್ಲಿ ನಡೆಯುವ ಎಲ್ಲ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ( Basavantappa Talwar Attend in all the Kannada programs held in Goa) ಕಳೆದ ಸುಮಾರು 16 ವರ್ಷಗಳಿಂದ ನಾವು ಗೋವಾ ರಾಜ್ಯಕ್ಕೆ ಬರುತ್ತಿದ್ದೇವೆ. ಯಾವುದೇ ಕನ್ನಡ ಕಾರ್ಯಕ್ರಮ ತಪ್ಪಿಸದೆಯೇ ಖಡ್ಡಾಯವಾಗಿ ಕನ್ನಡ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಬಸವಂತಪ್ಪ ತಳವಾರ ಇನ್ನಿಲ್ಲವಾಗಿದ್ದಾರೆ. ಇವರ ಆತ್ಮಕ್ಕೆ ತಾಯಿ ಭುವನೇಶ್ವರಿ ಚಿರಶಾಂತಿ ನೀಡಲಿ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.