ಸುದ್ಧಿಕನ್ನಡ ವಾರ್ತೆ
Goa: ಸಮಾಜ ಸೇವೆಯನ್ನು ಗುರುತಿಸಿ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಅಶೋಕ ಕೃಷ್ಣ ಶೆಟ್ಟಿ ರವರಿಗೆ ಡಿಸೆಂಬರ್ 19 ರಂದು ಗೋವಾ ವಿಮೋಚನಾ ದಿನದ ಅಂಗವಾಗಿ ಪಣಜಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೋವಾ ರಾಜ್ಯ ಪ್ರಶಸ್ತಿಯಾದ ಬೆಸ್ಟ ಸೋಶಿಯಲ್ ವರ್ಕ ಅವಾರ್ಡ ನೀಡಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಗೌರವಿಸಿದ್ದಾರೆ.

ಮುಡಾರು ಗ್ರಾಮದ ಆರಂತಬೆಟ್ಟುವಿನ ಅಶೋಕ ಕೃಷ್ಣ ಶೆಟ್ಟಿ ರವರು 1987 ರಲ್ಲಿ ಉದ್ಯೋಗಕ್ಕಾಗಿ ಗೋವಾಕ್ಕೆ ಬಂದಿದ್ದರು. ಆರ್ ಎಸ್ ಎಸ್ ಮುಖಂಡರಾಗಿರುವ ಅಶೋಕ ಶೆಟ್ಟಿ ರವರು ಉದ್ಯಮಿ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಪಟ್ಲ ಫೌಂಡೇಶನ್ ಗೋವಾ, ತುಳು ಕೂಟ ಗೋವಾ ಇದರ ಸಂಯೋಜಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೋವಾದ ವಿವಿಧ ಸಂಘಟನೆಗಳಲ್ಲಿಯೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.