ಸುದ್ಧಿಕನ್ನಡ ವಾರ್ತೆ
Goa Panaji: ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಗೋವಾ ವಿಮುಕ್ತಿ ದಿನದ ಅಂಗವಾಗಿ ಡಿಸೆಂಬರ್ 19 ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ ಗೋವಾ ಮೆಡಿಕಲ್ ಕಾಲೇಜಿನ ಬ್ಲಡ್ ಬ್ಯಾಂಕ್ ವಿಭಾಗದಲ್ಲಿ ಗೋವಾ ಕನ್ನಡ ಸಮಾಜ ಪಣಜಿ, ಗೋವಾ ಕೇಸರಿ ಹಾಗೂ ಶ್ರೀಮೀಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಭಿರ ಆಯೋಜಿಸಲಾಗಿದೆ.

ಈ ರಕ್ತದಾನ ಶಿಭಿರಕ್ಕೆ ಉದ್ಯಮಿ ವಿನಾಯಕ ಎಂ.ಶಾನಭೋಗ್ ರವರು ಚಾಲನೆ ನೀಡಲಿದ್ದಾರೆ. ಗೋವಾ ವಿಮುಕ್ತಿ ಹೋರಾಟಗಾರರಾದ ರೋಹಿತ್ ದೇಸಾಯಿ ರವರಿಗೆ ಮಧ್ಯಾನ್ಹ 12 ಗಂಟೆಗೆ ಅವರ ಸ್ವಗ್ರಹದಲ್ಲಿ ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗದೆ. ರಕ್ತದಾನ ಮಾಡಲಿಚ್ಚಿಸುವವರು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್( ದೂ-9890912106) ಅಥವಾ ಶ್ರೀಕಾಂತ ಲೋಣಿ ಕಾರ್ಯದರ್ಶಿ ಗೋವಾ ಕನ್ನಡ ಸಮಾಜ (ದೂ-9226545079) ರವರನ್ನು ಸಂಪರ್ಕಿಸಬಹು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಕ್ತದಾನವು ಒಂದು ಶ್ರೇಷ್ಠದಾನ. ಒಂದು ಜೀವ ತುರ್ತು ಪರಿಸ್ಥಿತಿಯಲ್ಲಿರುವಾಗ ನಾವು ದಾನ ಮಾಡಿದ ರಕ್ತವು ಆ ವ್ಯಕ್ತಿಗೆ ಸಂಜೀವಿನಿಯಾಗಬಹುದು. ಇದರಿಂದಾಗಿ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸ್ವ ಇಚ್ಛೆಯಿಂದ ಈ ರಕ್ತದಾನ ಶಿಭಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ.