ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಜಮೀನು ಒತ್ತುವರಿ ಪ್ರಕರಣದ ಮಾಸ್ಟರ್ ಮೈಂಡ್ ಸುಲೇಮಾನ್ ಖಾನ್ ಜೈಲಿನಿಂದ ಪರಾರಿಯಾಗಲು ಸಹಾಯ ಮಾಡಿದ್ದ ಐಆರ್ ಬಿ ಕಾಸಸ್ಟೆಬಲ್ ಅಮಿತ್ ನಾಯ್ಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಈತ ಟಾಯ್ಲೆಟ್ ನಲ್ಲಿದ್ದ ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ, ಆದರೆ ಆ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೋಲಿಸರಿಗೆ ಮಾಹಿತಿ ತಿಳಿದು ಆತನನ್ನು ತಡೆದಿದ್ದಾರೆ ಎನ್ನಲಾಗಿದೆ.

ಕಾನಸ್ಟೆಬಲ್ ಅಮಿತ್ ನಾಯ್ಕ ಈತ ಕಳೆದ ಶನಿವಾರ ಹುಬ್ಬಳ್ಳಿ ಪೋಲಿಸರಿಗೆ ಶರಣಾಗಿದ್ದ. ನಂತರ ಈತನನ್ನು ಹುಬ್ಬಳ್ಳಿಯಿಂದ ಗೋವಾಕ್ಕೆ ಕರೆತಂದು ಪಣಜಿ ಕೋರ್ಟ ಗೆ ಹಾಜರು ಪಡಿಸಿದಾಗ ಕೋರ್ಟ ಈತನಿಗೆ 4 ದಿನ ಪೋಲಿಸ್ ಕಸ್ಟಡೆಇ ನೀಡಿತ್ತು.

ಪಿನಾಯಿಲ್ ಕುಡಿದು ಆತ್ಮಗತ್ಯೆಗೆ ಯತ್ನಿಸಿದ ಈತನನ್ನು ಗೋವಾ ಬಾಂಬೋಲಿಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮಿತ್ ನಾಯ್ಕ ಈತ ಜಮೀನು ಒತ್ತುವರಿ ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್ ಸುಲೇಮಾನ್ ಖಾನ್ ಜೈಲಿಂದ ಪರಾರಿಯಾಗಲು ತನ್ನ ಸ್ವಂತ ಬೈಕ್ ಮೂಲಕ ಹುಬ್ಬಳ್ಳಿಗೆ ತಲುಪಿಸಿದ್ದ. ಈ ಎಲ್ಲ ಕೃತ್ಯ ಸಿಸಿಟಿವಿ ಫುಟೇಜ್ ನಲ್ಲಿ ಬಯಲಾಗಿತ್ತು. ಕಾನಸ್ಟೆಬಲ್ ಅಮಿತ್ ಹುಬ್ಬಳ್ಳಿ ಪೋಲಿಸರಿಗೆ ಶರಣಾಗಿದ್ದ.