ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಸರಿಸುಮಾರು 450 ವರ್ಷ ಪೋರ್ಚುಗೀಸರು ಆಳ್ವಿಕೆ ನಡೆಸಿದ್ದಾರೆ. ಪರಿಣಾಮ ಗೋವಾರ್ಚುಗೀಸರ ಆಢಲಿತದಲ್ಲಿ ಹಲವು ವಿಷಯಗಳು ನಮ್ಮ ಮೇಲೆ ಪ್ರಭಾವ ಬೀರಿದೆ. ಭಾಷೆ,ವೇಷಭೂಷಣ,ಆಹಾರ ಹೀಗೇ ಹೆಚ್ಚು ಪ್ರಭಾವ ಬೀರಿದೆ. ಅಂತೆಯೇ ಪಾವ್ ಕೂಡ ಒಂದು. ಗೋವಾದಲ್ಲಿ ಬೆಳಗ್ಗಿನ ಚಹಾ ಮತ್ತು ಸಂಜೆಯ ಚಹಾ ಸೇವನೆಯ ವೇಳೆ ಗೋಮಂತಕೀಯರು ಪಾವ್ ಸೇವನೆ ಆಹಾರದ ಮುಖ್ಯ ಭಾಗ. ಗೋವಾದ ಪಾವ್ ಹೊರ ರಾಜ್ಯಕ್ಕೂ ಪೂರೈಕೆಯಾಗುತ್ತಿರುವುದು ವಿಶೇಷ.

ಗೋವಾದ ಪಾವ್ ಎಷ್ಟು ಪ್ರಸಿದ್ಧಿ ಎಂದರೆ ಗೋವಾದಿಂದ ಹೊರ ರಾಜ್ಯಗಳಿಗೂ ಪಾವ್ ಪೂರೈಕೆಯಾಗುತ್ತದೆ; ಮುಂಬಯಿ. ಬೆಂಗಳೂರು, ಕರ್ನಾಟಕದ ಇತರ ಕೆಲ ಭಾಗಗಳಿಗೆ, ಸಿಂಧುದುರ್ಗ ಹೀಗೆ ವಿವಿಧ ರಾಜ್ಯಗಳಿಗೆ ಗೋವಾದಿಂದ ಪಾವ್ ಪೂರೈಕೆಯಾಗುತ್ತದೆ.