ಸುದ್ಧಿಕನ್ನಡ ವಾರ್ತೆ
Goa Panaji: ಪ್ರಯಾಗರಾಜ್,ಉತ್ತರಪ್ರದೇಶದಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಗೋವಾ ಮುಖ್ಯಮಂತ್ರಿ ಡಾ,ಪ್ರಮೋದ ಸಾವಂತ್ ರವರನ್ನು ಆಮಂತ್ರಿಸಲಾಗಿದೆ. ಉತ್ತರಪ್ರದೇಶದ ಮಂತ್ರಿ ದಾರಾಸಿಂಗ್ ಚೌಹಾಣ್ ಹಾಗೂ ರಾಜ್ಯಮಂತ್ರಿ ರಾಮಕೇಶ ನಿಷದ್ ರವರನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರನ್ನು ಭೇಟಿ ಮಾಡಿ ಮಹಾಕುಂಭಮೇಳದ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಉತ್ತರಪ್ರದೇಶ ಮಂತ್ರಿ ದಾರಾಸಿಂಗ್ ಚೌಹಾಣ್ ಮತ್ತು ರಾಜ್ಯಮಂತ್ರಿ ರಾಮಕೇಶ ನಿಷದ್ ರವರು ಪಣಜಿಯ ಅಲ್ತಿನೊದ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿ ಮಹಾಕುಂಭಮೇಳದ ಆಮಂತ್ರಣ ನೀಡಿದ್ದಾರೆ. 2025 ರ ಜನವರಿ 13 ರಿಂದ ಫೆಬ್ರುವರಿ 26 ರವರೆಗೆ ತ್ರಿವೇಣಿ ಸಂಗಮ ಪ್ರಾಯಾಗರಾಜ್ ನಲ್ಲಿ ನಡೆಯಲಿರುವ ಮಹಾಕುಂಭಮೇಳದಲ್ಲಿ ಉಸ್ಥಿತರಿರುವಂತೆ ಗೋವಾ ಮುಖ್ಯಮಂತ್ರಿಗಳಿಗೆ ಆಮಂತ್ರಣ ನೀಡಲಾಗಿದೆ.
——ಎಲ್ಲೆಲ್ಲಿ ಕುಂಭಮೇಳ—–
ದೇಶದ ಕೇವಲ ನಾಲ್ಕು ಪವಿತ್ರ ನದಿ ಹಾಗೂ ನಾಲ್ಕು ತೀರ್ಥ ಕ್ಷೇತ್ರಳಲ್ಲಿ ಕುಂಭಮೇಳವನ್ನು ಆಯೋಜಿಸಲಾಗುತ್ತದೆ. ಪ್ರಾಯಾಗರಾಜ್ ಸಂಗಮ, ಹರಿಧ್ವಾರದ ಗಂಗಾನದಿ, ಉಜ್ಜೈನಿಯ ಶಿಪ್ರಾ ಮತ್ತು ನಾಸಿಕ್ ನಲ್ಲಿನ ಗೋವಾದವರಿ ಯಲ್ಲಿ ಕುಂಭಮೇಳವನ್ನು ಆಯೋಜನೆ ಮಾಡಲಾಗುತ್ತದೆ.