ಸುದ್ಧಿಕನ್ನಡ ವಾರ್ತೆ
Goa Mapusa: ಗೋವಾ ವಿಧಾನಸಭೆಯ ಉಪಸಭಾಪತಿ ಜೋಶುವಾ ಡಿಸೋಜಾ ರವರು ಪ್ರಧಾನಿ ನರೇಂದ್ರ ಮೋದಿ ರವರಿಗೆ ತಮ್ಮ ಮದುವೆಯ ಆಮಂತ್ರಣ ನೀಡಿದ್ದಾರೆ. ಜೋಶುವಾ ಡಿಸೋಜಾ ರವರು ನವದೆಹಲಿಗೆ ತೆರಳಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ತಮ್ಮ ಮದುವೆಯ ಆಮಂತ್ರಣಪತ್ರಿಕೆ ನೀಡಿ, ಈ ಪೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಗೋವಾದ ಮಾಪ್ಸಾ ಮತಕ್ಷೇತ್ರದ ಶಾಸಕರಾಗಿರುವ ಗೋವಾ ವಿಧಾನಸಭೆಯ ಉಪಸಭಾಪತಿ ಜೋಶುವಾ ಡಿಸೋಜಾ ರವರು ಶೀಘ್ರದಲ್ಲಿಯೇ ವೈವಾಹಿ\ಕ ಬಂಧನಕ್ಕೆ ಸಿಲುಕಲಿದ್ದಾರೆ. ಪ್ರಧಾನಿಗಳೊಂದಿಗೆ ಉಪಸಭಾಪತಿಗಳು ಸಂವಾದ ನಡೆಸಿದ್ದಾರೆ. ಮೋದಿಯವರು ನನ್ನ ತಂದೆ ಫ್ರಾನ್ಸಿಸ್ ಡಿಸೀಜಾ ರವರ ನೆನಪು ಮಾಡಿಕೊಂಡಿದ್ದಾರೆ. ಗೋವಾಕ್ಕೆ ನನ್ನ ತಂದೆಯವರು ನೀಡಿದ ಕೊಡುಗೆಯ ಕುರಿತು ಕೂಡ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಪ್ರಧಾನಿಗಳೊಂದಿಗಿನ ಸಂವಾದ ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ಅವರ ಮಾರ್ಗದರ್ಶನ ಮತ್ತು ಆಶಿರ್ವಾದ ನನಗೆ ಬಹುಮೂಲ್ಯವಾಗಿದೆ ಎಂದು ಗೋವಾ ಉಪಸಭಾಪತಿ ಜೋಶುವಾ ಡಿಸೋಜಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ.