ಸುದ್ಧಿಕನ್ನಡ ವಾರ್ತೆ
Goa: ದೇವಸ್ಥಾನದಲ್ಲಿ ತಾಟಿಗೆ ಬರುವ ದಕ್ಷಿಣೆ ಮತ್ತು ವಸ್ತುಗಳ ಮೇಲೆ ದೇವರ ಸೇವೆ ಸಲ್ಲಿಸುವ ಪುರೋಹಿತರ ಸಂಪೂರ್ಣ ಹಕ್ಕಿದೆ, ಎಂಬುದನ್ನು ಉಚ್ಛ ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ದೇವಸ್ಥಾನದ ಹುಂಡಿಗೆ ಬರುವ ಕಾಣಿಕೆ ದೇವಸ್ಥಾನಕ್ಕೆ ಲಭಿಸಲಿದೆ. ಕಳೆದ ರವಿವಾರ ದೇವಸ್ಥಾನದಲ್ಲಿ ಯಾವ ಘಟನೆ ನಡೆದಿದೆಯೋ ಅದರಲ್ಲಿ ಸಹಭಾಗಿಯಾಗಿರುವ ಗ್ರಾಮಸ್ಥರಿಗೆ ಈ ವಿಷಯ ತಿಳಿದಿಲ್ಲ ಅನ್ನಿಸುತ್ತದೆ ಎಂದು ಸಚಿವ ಸುದೀನ ಧವಳೀಕರ್ ಅಭಿಪ್ರಾಯಪಟ್ಟಿದ್ದಾರೆ.

ಗೋವಾದ ಮಡಕಯಿ ಶ್ರೀ ಶಾಂತಾದುರ್ಗಾ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ನಡೆಸಿದ ಘಟನೆಯ ನಂತರ ದೇವಸ್ಥಾನದ ಪರಿಸರದಲ್ಲಿ ಪೋಲಿಸ್ ಬಂದೋಬಸ್ತ ಕಲ್ಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಕಯಿ ಕ್ಷೇತ್ರದ ಶಾಸಕ ಹಾಗೂ ಸಚಿವ ಸುದೀನ ಧವಳೀಕರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ,

ಗೋವಾದ ಮಡಕಯಿ ಶ್ರೀ ನವದುರ್ಗಾ ಸಂಸ್ಥಾನದಲ್ಲಿ ಕಳೆದ ಕೆಲ ದಿನಗಳಿಂದ ಹೊಸ ಮೂರ್ತಿ ಪ್ರತಿಷ್ಠಾಪನೆ ವಿಷಯಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಮಹಾಜನರು ಮತ್ತು ಗ್ರಾಮಸ್ಥರ ನಡುವೆ ವಾದ ನಡೆಯುತ್ತಲೇ ಇದೆ. ನ್ಯಾಯಾಲಯದ ಆದೇಶದ ನಂತರ ಕೂಡ ಈ ವಾದ ಕಡಿಮೆಯಾಗಿಲ್ಲ. ಡಿಸೆಂಬರ್ 9 ರಂದು ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ನಡೆಸಿದ ಘಟನೆಯ ನಂತರ ದೇವಸ್ಥಾನದ ಪರಿಸರದಲ್ಲಿ ಆತಂಕಕರ ವಾತಾವರಣ ನಿರ್ಮಾಣವಾಗಿದೆ.

 

ಬ್ರಾಹ್ಮಣರ ದಕ್ಷಿಣೆ ಕಸಿದುಕೊಳ್ಳುತ್ತಿರುವ ದೇವಸ್ಥಾನ ಸಮೀತಿ…?
ಗೋವಾದ ಇತರ ಹಲವು ದೇವಸ್ಥಾನಗಳಲ್ಲಿ ತಟ್ಟೆಗೆ ಭಕ್ತರು ಹಾಕಿದ ದಕ್ಷಿಣೆಯನ್ನೂ ದೇವಸ್ಥಾನದ ಸಮೀತಿಯವರೇ ತೆಗೆದುಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದೆ. ಕರ್ನಾಟಕದಿಂದ ಗೋವಾಕ್ಕೆ ಬಂದಿರುವ ಹಲವು ಜನ ಅರ್ಚಕರು ಇದೇ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಇವರೆಲ್ಲರಿಗೆ ಈ ವಿಷಯದ ಕುರಿತು ತಿಳಿಹೇಳುವವರು ಯಾರು…? ಎಂಬುದು ಪ್ರಶ್ನೆಯಾಗಿದೆ.