ಸುದ್ಧಿಕನ್ನಡ ವಾರ್ತೆ
ಪಣಜಿ: ಟ್ರೆಕಿಂಗ್ ಮುಗಿಸಿ ಗೋವಾದ ಬಟರ್ ಪ್ಲೈ ಬೀಚ್ ಗೆ ಬಂದಿದ್ದ ಮುಂಬಯಿ ಪ್ರವಾಸಿ ಗೋವಾ ಬೀಚ್ ಬಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಟ್ರೆಕಿಂಗ್ ಮುಗಿಸಿ ಬಂದ ನಂತರ ಯುವಕನಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು, ಸ್ವಲ್ಪ ಸಮಯದಲ್ಲೇ ವಾಂತಿ ಸೇವೆರಿದಂತೆ ವಿವಿಧ ತೊಂದರೆ ಕಾಣಿಸಿಕೊಂಡಿತು. ಯುವಕ ತನ್ನ ಮಿತ್ರರೊಂದಿಗೆ ಗೋವಾ ಬೀಚ್ ಗೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಮಿರಾಲಾ ಗಾಲಾ (23) ಎಂಬ ಮುಂಬಯಿ ಮೂಲದ ವ್ಯಕ್ತಿಯೇ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ. ಡಿಸೆಂಬರ್ 5 ರಂದು ತನ್ನ ಮಿತ್ರರೊಂದಿಗೆ ಗೋವಾ ಪ್ರವಾಸಕ್ಕೆ ಬಂದಿದ್ದ ಈತ ಗೋವಾದ ವರ್ಕಾದ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಎನ್ನಲಾಗಿದೆ.

ಡಿಸೆಂಬರ್ 8 ರಂದು ಬಟರ್ ಪ್ಲೈ ಬೀಚ್ ನಲ್ಲಿ ಟ್ರೆಕಿಂಗ್ ಮುಗಿಸಿ ಬಂದಿದ್ದ ಈತ ಸಾವನ್ನಪ್ಪಿದ್ದಾನೆ. ಕೂಡಲೇ ಈತನನ್ನು ಬಾಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದೊಯ್ಯಲಾಯಿತು, ಆದರೆ ಅಷ್ಟರಲ್ಲೇ ಈತ ಸಾವನ್ನಪ್ಪಿದ್ದ ಎನ್ನಲಾಗಿದೆ. ಕುಂಕಳ್ಳಿ ಪೋಲಿಸರು ಈ ಘಟನೆಯನ್ನು ಅನೈಸರ್ಗಿಕ ಮೃತ್ಯು ಎಂದು ದಾಖಲಿಸಿಕೊಂಡಿದ್ದಾರೆ.