ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಶಿವೋಲಿಯಲ್ಲಿ ಗೃಹಬಳಕೆಯ ಸಿಲಿಂಡರ್ ಸ್ಪೋಟಗೊಂಡು ದಂಪತಿಗಳು ಗಂಭೀರಗಾಯಗೊಂಡ ಘಟನೆ ನಡೆದಿದೆ.ಸದ್ಯ ಈ ದಂಪತಿಗಳಿಗೆ ಗೋವಾ ಮೆಡಿಕಲ್ ಕಾಲೇಜು ಬಾಂಬೋಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಪ್ಸಾ ಸಮೀಪದ ಶಿವೋಲಿಯ ಸಡಯೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.
ರಾಮ ದುಲಾರಿ(31), ಸುನನ್ ದುಲಾರಿ(29) ಎಂಬ ದಂಪತಿಗಳು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಶಿವೋಲಿಯಲ್ಲಿ ಬಾರಿಗೆ ಮನೆಯಲ್ಲಿ ಈ ದಂಪತಿಗಳು ವಾಸಿಸುತ್ತಿದ್ದರು. ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಘಟನೆಯ ಪಂಚನಾಮೆ ನಡೆಸಿದ್ದಾರೆ.
ಪೋಲಿಸರಿಂದ ಲಭ್ಯವಾದ ಮಾಹಿತಿಯ ಅನುಸಾರ- ದುಲಾರಿ ದಂಪತಿಗಳು ಮನೆಗೆ 5 ಲೀಟರ್ ನ ಸಣ್ಣ ಸಿಲಿಂಡರ್ ತೆಗೆದುಕೊಂಡು ಬಂದಿದ್ದರು. ಈ ಸಿಲಿಂಡರ್ ಇದ್ದಕ್ಕಿದ್ದಂತೆಯೇ ಸ್ಫೋಟಗೊಂಡಿತು. ಈ ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೊದಲಿಗೆ ಉತ್ತರಗೋವಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬಾಂಬೋಲಿಂ ಆಸ್ಪತ್ರೆಗೆ ದಾಖಲಿಸಲಾಗಿದೆ.