ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ದೇವಸ್ಥಾನವೊಂದರಲ್ಲಿ ನಡೆಯುತ್ತಿದ್ದ ವಾದವೊಂದಕ್ಕೆ ಸಂಬಂಧಿಸಿದಂತೆ ಸೋಮವಾರ ದೇವಸ್ಥಾನದ ಅರ್ಚಕರ ಮೇಲೆ ಕೆಲ ಜನರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಗೋವಾದ ಮಡಕಯಿ ಶ್ರೀ ನವದುರ್ಗಾ ಸಂಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಆತಂಕಕರ ವಾತಾವರಣ ಸೃಷ್ಠಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಠೀಕರಣ ನೀಡಲು ದೇವಸ್ಥಾನದ ಅರ್ಚಕರು ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ದೇವಸ್ಥಾನದ ಅರ್ಚಕರಾದ ಗೌರವ ಗೇಸಾಸ್ ರವರು ನೀಡಿದ ಮಾಹಿತಿಯ ಅನುಸಾರ- ಕೆಲವು ಜನರು ದೇವಸ್ಥಾನದ ಅರ್ಚಕರಿಗೆ ನೀಡುವ ತೆಂಗಿನಕಾಯಿ, ದಕ್ಷಿಣೆ, ಮತ್ತು ಇತರ ವಸ್ತುಗಳನ್ನು ನಿರ್ಬಂಧಿಸಲು ಪ್ರಯತ್ನಿಸಿದರು. ಇದಕ್ಕೆ ದೇವಸ್ಥಾನದ ಅರ್ಚಕರು ವಿರೋಧ ವ್ಯಕ್ತಪಡಿಸಿದರು. ಇದು ವಿಕೋಪಕ್ಕೆ ತಲುಪಿತ್ತು. ಅದೇ ಸಂದರ್ಭದಲ್ಲಿ ದೇವಸ್ಥಾನದಿಂದ ಮನೆಗೆ ಬರುತ್ತಿದ್ದ ವಿಭವ ಗೆಸಾಸ್ ರವರ ಮೇಲೆ ಕೆಲವು ಹಲ್ಲೆ ನಡೆಸಲು ಆರಂಭಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನದ ಅರ್ಚಕರು ಪೋಲಿಸ್ ದೂರು ದಾಖಲಿಸಿದ್ದಾರೆ. ಹಲ್ಲೆ ನಡೆಸಿದ ಪ್ರತಿಯೊಬ್ಬರಿಗೂ ಶಿಕ್ಷೆಯಾಗಬೇಕು ಎಂದು ದೇವಸ್ಥಾನದ ಅರ್ಚಕರು ಆಘ್ರಹಿಸಿದ್ದಾರೆ. ಇಷ್ಟೇ ಅಲ್ಲದೆಯೇ ದೇವಸ್ಥಾನದಲ್ಲಿ ಮೂರ್ತಿ ವಾದಕ್ಕೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ ಎಂದು ಗೌರವ ಗೇಸಾಸ್ ಹೇಳಿಕೆ ನೀಡಿದ್ದಾರೆ. ಕಳೆದ ಹಲವು ಪೀಳಿಗೆಯಿಂದ ಗೇಸಾಸ್ ಕುಟುಂಬ ಈ ದೇವಸ್ಥಾನದ ಪೂಜೆ ನಡೆಸುತ್ತ ಬಂದಿದೆ. ಆದರೆ ದೇವಸ್ಥಾನಕ್ಕೆ ಬರುವ ಉತ್ಪನ್ನವನ್ನು ನಿಬಧಿಸುವ ಪ್ರಯತ್ನ ಕೂಡ ನಡೆದಿದೆ. ಆದರೆ ನ್ಯಾಯಾಲಯದ ನಿರ್ಣಯದ ಅನುಸಾರ ಪೂಜಾರಿಗಳ ಪಾಲಿಗೆ ಬರುವ ಉತ್ಪನ್ನವನ್ನು ನಾವು ಸ್ವೀಕರಿಸುತ್ತೇವೆ ಎಂದು ಗೇಸಾಸ್ ನುಡಿದರು.