ಸುದ್ಧಿಕನ್ನಡ ವಾರ್ತೆ
ಪಣಜಿ: ದೇಶವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅಂತೆಯೇ ಹಿಂದೂಗಳಿಗೆ ಅನ್ಯಾಯವಾದಾಗ ಅದಕ್ಕೆ ಸ್ಪಂಧಿಸಲು ಸಿದ್ಧರಿರಬೇಕು ಎಂದು ಹಿಂಧುತ್ವ ನಾಯಕ ಟಿ.ರಾಜಾಸಿಂಗ್ ನುಡಿದರು.
ವಿಶ್ವಹಿಂದೂಪರಿಷತ್ ಹಾಗೂ ಬಜರಂಗದಳದ ವತಿಯಿಂದ ಕುಡಚಡೆಯಲ್ಲಿ ಗೀತಾ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಗೋವಾದಲ್ಲಿ ಹೋರಾಟ ಮಾಡಲು ಕಡಿಮೆ ಜನರಿದ್ದರೂ ಮಹಾರಾಷ್ಟ್ರ,ಕರ್ನಾಟಕದಿಂದ ಜನಶಕ್ತಿ ತರುತ್ತೇವೆ ಎಂದು ಟಿ.ರಾಜಾಸಿಂಗ್ ನುಡಿದರು.
ಮತಾಂತರ ನಡೆಯುತ್ತಿದ್ದಾಗ ಛತ್ರಪತಿ ಶಿವಾಜಿ ಮಹಾರಾಜರು ಅವರನ್ನು ತಡೆಯುವ ಕೆಲಸ ಮಾಡಿದರು. ಅವರೇ ನಮ್ಮ ದೇವರು, ಶಿವಾಜಿ ನಮಹಾರಾಜರು ಇರದಿದ್ದರೆ ಹಿಂದೂ ಧರ್ಮ ಅಂತ್ಯವಾಗುತ್ತಿತ್ತು. ಇಂದುಗೂ ಅದೇ ಪರಿಸ್ಥಿತಿಯಿದೆ. ಆದ್ದರಿಂದ ಬಜರಂಗದಳ ಹಿಂದೂಗಳ ರಕ್ಷಣೆ ಹಾಗೂ ಗೋವುಗಳ ರಕ್ಷಣೆ ಭಜರಂಗದಳದ ಹೋರಾಟದಿಂದ ಮಾತ್ರ ಸಾಧ್ಯ. ಮೊದಲು ಹಿಂದೂ ಆಗು ಆಮೇಲೆ ರಾಜಕಾರಣಿಯಾಗು ಎಂದು ಹೇಳುತ್ತೇವೆ. ಧರ್ಮ ರಕ್ಷಣೆ ಮಾಡಬೇಕಾದರೆ ವಿಶ್ವಹಿಂದೂ ಪರಿಷತ್ ನಲ್ಲಿ ಭಾಗವಹಿಸಿ ಎಂದು ರಾಜಾಸಿಂಗ್ ನುಡಿದರು.
ಮುಸ್ಲಿಂ ಧರ್ಮ ಹರಡುವ ಪ್ರಯತ್ನ ತಡೆಯಬೇಕು….
ಇಂದು ಹಲವು ಮನೆಗಳಲ್ಲಿ ರಾಮಾಯಣ,ಮಹಾಭಾರತ, ಭಗವಧ್ಗೀತೆ ಪುಸ್ತಕಗಳು ಇಲ್ಲದಿರುವುದು ನಮ್ಮ ದೌರ್ಭಾಗ್ಯ. ಭಾರತದಲ್ಲಿ ಮುಸ್ಲಿಂ ಧರ್ಮ ಹರಡುವ ಪ್ರಯತ್ನಗಳನ್ನು ತಡೆಯಬೇಕು. ಬಾಂಗ್ಲಾದೇಶದಲ್ಲಿ ಇಂದು ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅದನ್ನು ತಡೆಯಲು ಪ್ರಧಾನಿ ಮೋದಿ ಕ್ರಮ ಕೈಗೊಳ್ಳಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ರಕ್ಷಿಸಲು ಭಜರಂಗದಳ ಸಿದ್ಧವಾಗಿದೆ ಎಂದು ಹಿಂಧುತ್ವ ನಾಯಕ ಟಿ.ರಾಜಾಸಿಂಗ್ ನುಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಹಿಂಧುತ್ವ ಹೋರಾಟಗಾರರಾದ ರಾಜೇಂದ್ರ ಪವಾರ, ಮೋಹನ್ ಅಂಶೆಕರ್, ಸಂಕೇತ ಅರ್ಸೆಕರ್, ಮತ್ತಿತರರು ಉಪಸ್ಥಿತರಿದ್ದರು. ಈ ಬಹಿರಂಗ ಸಭೆಯಲ್ಲಿ ಭಾರಿ ಸಂಖ್ಯೆಯಲ್ಲಿ ಹಿಂದುಗಳು ಉಪಸ್ಥಿತರಿದ್ದರು.