ಸುದ್ಧಿಕನ್ನಡ ವಾರ್ತೆ
Goa: ಗೋವಾದ ಶ್ರೀ ಲಲಿತಾ ಭಜನಾ ಮಂಡಳಿಯ ಮಾತೆಯರು ಗೋವಾ ಕನ್ನಡ ಸಮಾಜ ಪಣಜಿಯಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಡಿಂಡಿಮ ಉತ್ಸವ ಕಾರ್ಯಕ್ರಮದಲ್ಲಿ ನಾಡಗೀತೆ,ಜಾನಪದಗೀತೆ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಲಲಿತಾ ಭಜನಾ ಮಂಡಳಿಯ ಸುಮಧುರ ಗಾಯನ ಮತ್ತು ವಸ್ತ್ರಸಂಹಿತೆ ಕನ್ನಡ ಡಿಂಡಿಮ ಉತ್ಸವದಲ್ಲಿ ಎಲ್ಲರ ಗಮನಸೆಳೆಯಿತು.
ಶ್ರೀ ಲಲಿತಾ ಭಜನಾ ಮಂಡಳಿಯ ಮಾತೆಯರು ಗೋವಾದಲ್ಲಿ ಶ್ರೀಮಧ್ಭಗವಧ್ಗೀತಾ, ಲಲಿತಾ ಸಹಸ್ರನಾಮ, ಹೀಗೆ ವಿವಿಧ ಭಜನೆಗಳನ್ನು ಆನ್ ಲೈನ್ ಮೂಲಕ ಪಠಿಸುವುದು ಮಾತ್ರವಲ್ಲದೆಯೇ ಉತ್ತಮ ಸಂಸ್ಕøತಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.