ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ತಾಲೂಕಿನ ಹಿತ್ಲಳ್ಳಿಯಿಂದ ಚವತ್ತಿ ಹೋಗುವ ದಾರಿಯಲ್ಲಿ ರಾತ್ರಿ ವೇಳೆಯಲ್ಲಿ ಚಿರತೆ ಸಂಚರಿಸುತ್ತಿದೆ.

ಶುಕ್ರವಾರ ರಾಯ್ರಿ ಸಮಯದಲ್ಲಿ 9.30 ರ ಸುಮಾರಿಗೆ ಪಂಚಾಯತ್ ಸದಸ್ಯಪ್ರಸನ್ನ ಭಟ್ ಅವರ ಕಾರಿಗೆ ದಾರಿಯಲ್ಲಿ ಚಿರತೆ ಅಡ್ಡ ಬಂದಿದ್ದು ಅದೇ ರೀತಿ ಶನಿವಾರ ಪುರಲ್ಲೇ ಮನೆ ಹತ್ತಿರ ಉಟಾರ್ತಿ ರಸ್ತೆಯಲ್ಲಿ ಹಾಡು ಹಗಲಲ್ಲಿ ಚಿರತೆ ಮಧ್ಯರಸ್ತೆಯಲ್ಲಿ ಸಂಚರಿಸುತ್ತಿದ್ದು ಸಾರ್ವಜನಿಕರು ಕಂಡು ಭಯಭೀತರಾಗಿದ್ದಾರೆ.ಇದರಿಂದ ಇಲ್ಲಿ ಸಂಚರಿಸುವ ಸಾರ್ವಜನಿಕರು, ಶಾಲಾಮಕ್ಕಳು ಇತರರು ಭಯಭೀತರಾಗಿದ್ದಾರೆ.

ಅರಣ್ಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಚಿರತೆಯನ್ನು ಹಿಡಿದು ಬೇರೆ ಕಾಡಿಗೆ ಹಸ್ತಾಂತರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.