ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ಪಟ್ಟಣದಲ್ಲಿ ನಡೆಯುವ ಸಂತೆ ವ್ಯಾಪಾರ ಮುಗಿಸಿ ಮನೆಗೆ ಬೈಕಿನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಬೈಕ್ ಗೆ ಲಾರಿ ಗುದ್ದಿದ ಪರಿಣಾಮ‌ ಸಹಸವಾರ ಸ್ಥಳದಲ್ಲಿ ಧಾರುಣ ಸಾವು ಕಂಡ ಘಟನೆ ರಾ.ಹೆ.೬೩ ಯಲ್ಲಾಪುರ ಪಟ್ಟಣದ ಅಗ್ನಿಶಾಮಕ ಠಾಣೆಯ ಎದುರು ನಡೆದಿದೆ.

ತಾಲೂಕಿನ ಮಲವಳ್ಳಿಯ ಮಾವಿನಮನೆಯ ರವಿ ಗೌಡಾ ಹಾಗೂ ಶಾರದಾ ಗೌಡಾ ಬೈಕಿನಲ್ಲಿ ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದ್ದು ಇವರ ಬೈಕಿಗೆ ಗುದ್ದಿದ ಲಾರಿ ಬೈಕಿನ ಮೇಲೆ ಹತ್ತಿ ಹೋಯಿತು.ಸವಾರ ರಸ್ತೆ ಪಕ್ಕ ಹಾರಿಬಿದ್ದು ಜೀವ ಉಳಿಯಿತು.ಗಂಭೀರ ಗಾಯಗೊಂಡಿದ್ದಾನೆ.ಆದರೆ ಹಿಂಬದಿ ಕುಳಿತಿದ್ದ ಶಾರದಾ ಗೌಡ ಇವಳ‌ಮೇಲೆ ಲಾರಿ ಚಲಿಸಿಕೊಂಡು ಹೋಗಿ ಧಾರುಣ ಸಾವು ಕಂಡಿದ್ದಾಳೆ.ಪೋಲಿಸರು ಪ್ರಕರಣ ಧಾಖಲಿಸಿದ್ದಾರೆ.