ಸುದ್ಧಿಕನ್ನಡ ವಾರ್ತೆ
Goa Panaji: ಗೋವಾ ರಾಜ್ಯದಲ್ಲಿ 130 ಕೋಟಿ ರೂ.ಗಳ ಅತಿ ದೊಡ್ಡ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಇದರ ವ್ಯಾಪ್ತಿ ಫಟೋರ್ಡಾ ಮಾಗಾರ್ಂವ್‍ನಿಂದ ಲಂಡನ್‍ವರೆಗೆ ಹರಡಿದೆ. ಆರ್ಥಿಕ ಅಪರಾಧಗಳ ವಿಭಾಗವು ತನಿಖೆ ನಡೆಸುತ್ತಿದೆ. ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ.

ಸುಮಾರು 130 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ಇಲಾಖೆಯಿಂದ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದ ನಿಮಿತ್ತ ಮಡಗಾಂವಗೆ ಬಂದಿದ್ದ ಮುಖ್ಯಮಂತ್ರಿಯನ್ನು ಈ ಕುರಿತು ಪ್ರಶ್ನಿಸಿದಾಗ, ಇದುವರೆಗೆ ರಾಜ್ಯದಲ್ಲಿ ನಡೆದಿರುವ ಅತಿ ದೊಡ್ಡ ವಂಚನೆ ಪ್ರಕರಣ ಇದಾಗಿದೆ. ಇದನ್ನು ಆರ್ಥಿಕ ಅಪರಾಧಗಳ ಇಲಾಖೆ ತನಿಖೆ ನಡೆಸುತ್ತಿದೆ. ಇದರ ವ್ಯಾಪ್ತಿ ಬಹಳ ದೊಡ್ಡದಾಗಿದೆ ಮತ್ತು ಈ ಅಕ್ರಮದ ವ್ಯಾಪ್ತಿಯು ಫಟೋರ್ಡಾ ಮಡಗಾಂವ್‍ನಿಂದ ಲಂಡನ್‍ಗೆ ತಲುಪಿದೆ. ಜನಸಾಮಾನ್ಯರೂ ಒಂದಷ್ಟು ಹಣ ಸಿಗಬಹುದೆಂಬ ನಿರೀಕ್ಷೆಯಲ್ಲಿ ಹೂಡಿಕೆ ಮಾಡಿದರು. ಆ ಜನ ಈಗ ಸಂಕಷ್ಟದಲ್ಲಿದ್ದಾರೆ. ಈ ವಂಚನೆ ಪ್ರಕರಣದ ಶಂಕಿತ ಆರೋಪಿ ಲಂಡನ್‍ನಲ್ಲಿದ್ದರೂ ಆತನನ್ನು ಬಂಧಿಸಿ ಗೋವಾಕ್ಕೆ ಕರೆತರಲಾಗುವುದು. ಅದಕ್ಕಾಗಿಯೇ ತನಿಖೆಯ ವೇಗವನ್ನು ಹೆಚ್ಚಿಸಲಾಗಿದೆ. ಸಾಮಾನ್ಯ ಜನರ ಆರ್ಥಿಕ ವಂಚನೆಯನ್ನು ಸಹಿಸುವುದಿಲ್ಲ. ಈ ಪ್ರಕರಣದಲ್ಲಿ ಎಲ್ಲ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.