ಸುದ್ಧಿಕನ್ನಡ ವಾರ್ತೆ
Goa : ಗೋವಾದ ಮೀನುಗಾರಿಕಾ ಬೋಟ್ ಮತ್ತು ಭಾರತೀಯ ನೌಕಾದಳದ ಹಡಗು ಇವೆರಡು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಈ ಘಟನೆಯಲ್ಲಿ 13 ಜನ ಮೀನುಗಾರರ ಪೈಕಿ 11 ಜನ ಮೀನುಗಾರರನ್ನು ರಕ್ಷಿಸಲಾಗಿದ್ದು ಇನ್ನಿಬ್ಬರು ನಾಪತ್ತೆಯಾದ ಘಟನೆ ನಡೆದಿದೆ. ನೌಕಾದಳವು ಈ ಕುರಿತ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದು ನವೆಂಬರ್ 21 ರಂದು ಸಂಜೆ ಗೋವಾದ ಉತ್ತರ-ಪಶ್ಚಿಮ ಸುಮಾರು 70 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಈ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ -ಮೀನುಗಾರಿಕಾ ಬೋಟ್ ನಿಂದ ನಾಪತ್ತೆಯಾದ ಇಬ್ಬರು ಮೀನುಗಾರರಿಗಾಗಿ ಭಾರತೀಯ ನೌಕಾದಳದ ಹಡಗು ಮತ್ತು ಚಾಪರ್ ಮೂಲಕ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ಮೀನುಗಾರಿಕಾ ಬೋಟ್ ಮತ್ತು ಹಡಗಿನ ನಡುವೆ ಯಾವ ಕಾರಣಕ್ಕೆ ಡಿಕ್ಕಿಯಾಗಿದೆ ಎಂಬುದಕೆ ಇದುವರೆಗೂ ನಿಖರ ಕಶರಣ ತಿಳಿದುಬಂದಿಲ್ಲ. ಸದ್ಯ ನಾಪತ್ತೆಯಾಗಿರುವ ಮೀನುಗಾರರ ಶೋಧ ಕಾರ್ಯಕ್ಕೆ ಪ್ರಾಧಾನ್ಯತೆ ನೀಡಲಾಗುತ್ತಿದೆ.