ಸುದ್ಧಿಕನ್ನಡ ವಾರ್ತೆ
Goa IFFI: ಕೇವಲ ಹಣವೊಂದಿದ್ದರೆ ಚಲನಚಿತ್ರ ನಿರ್ಮಾಣ ಸಾಧ್ಯವಿಲ್ಲ. ಇದಕ್ಕಾಗಿ ಮನಸ್ಸಿನಿಂದ ಕೆಲಸ ಮಾಡುವ ಇಚ್ಛಾ ಶಕ್ತಿಯ ಅಗತ್ಯವೂ ಇದೆ. ಎಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಂಚಾಲಕ ಶೇಖರ್ ಕಪೂರ್ ಅಭಿಪ್ರಾಯಪಟ್ಟರು.

ಗೋವಾ ರಾಜಧಾನಿ ಪಣಜಿ ಸಮೀಪದ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂ ನಲ್ಲಿ ಬುಧವಾರ ಸಂಜೆ 55 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉಧ್ಘಾಟನೆಗೊಂಡಿದೆ. ದಕ್ಷಿಣ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಫಿಲ್ಮಂ ಬಜಾರ್ 15 ನೇಯ ಆವೃತ್ತಿ ಕೂಡ ಉಧ್ಘಾಟನೆಗೊಂಡಿದೆ. ಶೇಖರ್ ಕಪೂರ್ ರವರು ಈ ಫಿಲ್ಮ ಬಜಾರ್ ಉಧ್ಘಾಟಿಸಿದ್ದಾರೆ.

ನಾನು ಫಿಲ್ಮಂ ಬಜಾರಕ್ಕೆ ಆಗಮಿಸುವ ಸಂದರ್ಭದಲ್ಲಿ ಚಲನಚಿತ್ರ ಕ್ಷೇತ್ರದಲ್ಲಿನ ಯುವ ಕಲಾವಿದರು ಭೇಟಿಯಾದರು. ಕೆಲವರು ನನಗೆ ತಮ್ಮ ಚಲನಚಿತ್ರದ ಕಥೆ ಹೇಳುವ ಇಚ್ಛೆಯ್ಲಿದ್ದರು, ಇನ್ನೂ ಕೆಲವರು ತಮ್ಮ ಹೊಸ ಸಿನಿಮಾ ಬಗ್ಗೆ ಹೇಳುವ ಇಚ್ಛೆಯಲ್ಲಿದ್ದರು. ಅವರ ಉತ್ಸಾಹ ಕಂಡು ನನಗೆ ಸಂತೋಷವಾಯಿತು ಎಂದು ಶೇಖರ್ ಕಪೂರ್ ನುಡಿದರು.

ಆಸ್ಸ್ರೇಲಿಯಾ ಭಾರತ ಉಪಾಯುಕ್ತ ನಿಕ ಮಾಕ ಕಾಫ್ರೆ, ಕೇಂದ್ರ ಮಾಹಿತಿ ಮತ್ತು ಪ್ರಸಿದ್ಧ ಖಾತೆ ಸಚಿವ ಸಂಜಯ್ ಜಾಜು, ವೃಂದಾ ದೇಸಾಯಿ, ಫಿಲ್ಮ ಬಜಾರದ ಸಲಹೆಗಾರ ಜೊರೊಮ್ ಪೆಲಾರ್ಡ ಉಪಸ್ಥಿತರಿದ್ದರು.

ಪ್ರಸಕ್ತ ವರ್ಷ ಫಿಲ್ಮ ಬಜಾರ್ ನಲ್ಲಿ ಆಸ್ಟ್ರೇಲಿಯಾ, ಜಪಾನ್, ಸ್ಪೇನ್, ಭೂತಾನ್, ಸೇರಿದಂತೆ 10 ದೇಶಗಳು ಪಾಲ್ಗೊಳ್ಳಲಿವೆ. ಈ ಪೈಕಿ ಆಸ್ಟ್ರೇಲಿಯಾ ದೇಶ ಕಂಟ್ರಿ ಆಫ್ ಫೋಕಸ್ ದೇಶವಾಗಿದೆ. ಇಂದು ಫಿಲ್ಮ ಬಜಾರ್ ನೊಂದಿಗೆ ವಿದೇಶಿ ಚಲನಚಿತ್ರ ನಿರ್ಮಾಪಕರಿಗೆ ಭಾರತಕ್ಕೆ ಬಂದು ಚಲನಚಿತ್ರ ನಿರ್ಮಿಸಲು ಸಿಂಗಲ್ ವಿಂಡೊ ಕ್ಲಿಯರೆನ್ಸ ಕೂಡ ಅನಾವರಣಗೊಳಿಸಲಾಗಿದೆ.