ಸುದ್ಧಿಕನ್ನಡ ವಾರ್ತೆ
Goa Panaji : ಗೋವಾ ರಾಜಧಾನಿ ಪಣಜಿಯ ಹವೆ ಪ್ರದೂಷಿತವಾಗಿದೆ. ಕಳೆದ ಮಂಗಳವಾರ ಪಣಜಿಯಲ್ಲಿ ಹವೆಯ ಗುಣವತ್ತಾ ನಿರ್ದೇಶಾಂಕ 332 ರಷ್ಟು ನೋಂದಾವಣೆಯಾಗಿದೆ. ಇದರಿಂದಾಗಿ ಇದೀಗ ಪಣಜಿಯಲ್ಲಿ ಉಸಿರಾಡುವುದು ಕೂಡ ಕಷ್ಟ ಎಂಬಂತಾಗಿದೆ. ಈ ಕುರಿತ ಆತಂಕಕಾರಿ ರಿಪೋರ್ಟ ಹೊರಬಿದ್ದಿದೆ.

ವೇಗವಾಗಿ ಬೆಳೆಯುತ್ತಿರುವ ನಗರೀಕರಣದಿಂದಾಗಿ ರಾಜಧಾನಿ ಪಣಜಿಯ ಹವೆ ಕಲುಷಿತವಾಗಿದೆ ಎಂದು ಗೋವಾ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ರಾಜ್ಯದ ಕುಡಚಡೆ ಮತ್ತು ಲೋಟಲಿ ಭಾಗದಲ್ಲಿಯೂ ಕೂಡ ಹವೆ ಕನಿಷ್ಠ ದರ್ಜೆಗೆ ತಲುಪಿದೆ ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ. ಕಳೆದ ಕೆಲ ತಿಂಗಳಿಗೆ ಹೋಲಿಸಿದರೆ ಪಣಜಿಯಲ್ಲಿ ಹವೆ ಇನ್ನಷ್ಟು ಕಲುಷಿತವಾಗಿರುವುದು ಬೆಳಕಿಗೆ ಬಂದಿದೆ.

ಪಣಜಿಯಲ್ಲಿ ಹವೆ ಇದಿವರೆಗೂ ಚಿಂತಾಜನಕವಾಗಿಲ್ಲ. ಪಣಜಿಯಲ್ಲಿ ಎಕ್ಯುಐ ಹೆಚ್ಚಿದೆ. ಇದು ವಾಹನಗಳ ಹೆಚ್ಚಳದಿಂದಾಗಿದೆ. ಶ್ವಾಸಕೋಶಕ ತೊಂದರೆ ಇದ್ದವರಿಗೆ ಪಣಜಿಯಲ್ಲಿ ಶ್ವಾಸ ತೆಗೆದುಕೊಳ್ಳುವುದು ಕಷ್ಟವಾಗಲಿದೆ. ಪಣಜಿಯಲ್ಲಿ ಪಿಎಂ 10 ಹಾಗೂ ಪಿಎಂ 2.5 ಹೆಚ್ಚಳವಾಗಿರುವುದು ಕಂಡುಬಂದಿದೆ. ಕಣ್ಣು ಮಂಜಾಗುವುದು ಮತ್ತು ಉಸಿರಾಟದ ತೊಂದರೆ ಎದುರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.