ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ದೀಪಾವಳಿ ಬರುವ ಮೊದಲೇ ಇಲ್ಲಿ ಹಬ್ಬದ ವಾತಾವರಣ ನಿರ್ಮಿಸಿದ್ದೀರಿ, ಜೊತೆಗೆ ರಾಮಾಯಣ, ಮಹಾಭಾರತದ ಯಾವುದೇ ಕಥಾ ಭಾಗದ ಯಕ್ಷಗಾನ ಪ್ರದರ್ಶಿಸಿದರೂ, ಅದರಲ್ಲೊಂದು ನೀತಿ ಸಿಗುತ್ತದೆ. ಅ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣ ವಾಗಿದ್ದೀರಿ,ಯಕ್ಷಗಾನ ಎಂದರೆ ಗಂಡು ಮೆಟ್ಟಿನ ಕಲೆ. ನವರಸ ಭರಿತ ಈ ಕಲೆಗೆ ಒಂದು ಪವಿತ್ರ ಸ್ಥಾನ ವಿದೆ. ಈ ಕಲೆಯನ್ನು ಸಪ್ತ ಸ್ವರ ಸೇವಾ ಸಂಸ್ಥೆಯವರು ಬೆಳೆಸುತ್ತಾ ಧಾರ್ಮಿಕವಾಗಿ ಕೂಡ ನಾವು ಜಾಗೃತ ಅವಸ್ಥೆಯಲ್ಲಿದ್ದೇವೆ ಎಂದು ತೋರಿಸಿ ಕೊಡುತ್ತಿದ್ದಾರೆ ಎಂದು ವೇಧ ಮೂರ್ತಿ ಪ್ರವೀಣ ಸದಾಶಿವ ಭಟ್ ಹೇಳಿದರು .

ಅವರು ಯರಮುಖ ದಲ್ಲಿ ನಡೆಯುತ್ತಿರುವ ಯಕ್ಷಗಾನ ಸಪ್ತಾಹದ ಮುಕ್ತಾಯ ಸಮಾರಂಭದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ, ಮಾತನಾಡುತ್ತ,ಇದು ಸೇವಾ ಸಂಸ್ಥೆಯಾದ್ದರಿಂದ ಹೆಚ್ಚಿನ ಸೇವೆ ಯೊಂದಿಗೆ ಆಚರಣೆ ಮಾಡಿದರೆ ಇನ್ನೂ ಹೆಚ್ಚಿನ ಬಲ ಬರುತ್ತದೆ, ಮತ್ತು ಅದು ಲೋಕಕಲ್ಯಾಣ ವಾದಂತೆ ಕೂಡ ಆಗುತ್ತದೆ ಎಂದು ಸಂಸ್ಕೃತ ಶ್ಲೋಕ ಗಳ ಮೂಲಕ ವಿವರಿಸಿದರು.ಈ ಸಪ್ತಾಹದಲ್ಲಿ ನಮ್ಮ ಮಕ್ಕಳೂ ಕೂಡ ಭಾಗವಹಿಸಿದ್ದಾರೆ, ಹಾಗಾಗಿ ತರಬೇತಿ ನೀಡಿದವರಿಗೂ, ಸ್ಥಳಾವಕಾಶ ಮಾಡಿಕೊಟ್ಟ ಸಂಸ್ಥೆ ಯವರಿಗೂ ನಾವು ಚಿರಋಣಿ ಎಂದರು.

ಜೋಯಿಡಾ ಕಾರ್ಯನಿರತ ಪತ್ರ ಕರ್ತರ
ಸಂಘದ ಅಧ್ಯಕ್ಷ ಪತ್ರಕರ್ತ ಸಂದೇಶ ದೇಸಾಯಿ ಮಾತನಾಡಿ, ಸಂಘಟನೆ, ಸಂಸ್ಥೆ ನಡೆಸುವುದು ತುಂಬಾ ಕಷ್ಟ ಆದರೂ ಅದನ್ನು ಯಶಸ್ವಿಯಾಗಿ ನಡೆಸಿ ತೋರಿಸುತ್ತಿದ್ದಾರೆ, ನಿರಂತರ ಏಳು ದಿನಗಳ ಕಾಲ ಕಾರ್ಯಕ್ರಮ ದ ಜೊತೆಗೆ ಊಟ ಕೂಡ ನೀಡುತ್ತಿರುವುದು ಮಹಾ ಸಾಧನೆ ಎಂದು ಸಂಘಟಕರನ್ನು ಅಭಿನಂದಿಸಿದರು. ಪತ್ರಕರ್ತ, ಟಿ ಕೆ ದೇಸಾಯಿ ಮಾತನಾಡಿ, ಸಂಸ್ಥೆಯಲ್ಲಿ ಕಳೆದ 16 ವರ್ಷ ಗಳಿಂದ ಉಟೋಪಚಾರದ ವ್ಯವಸ್ಥೆ ಮಾಡಿದ ಪರಮೇಶ್ವರ ಸಿದ್ದಿ ದಂಪತಿ ಗಳಿಗೆ ಮುಂದಿನ ಬೆಳ್ಳಿಹಬ್ಬದಲ್ಲಿ ಅನ್ನಪೂರ್ಣೇಶ್ವರಿ ಪ್ರಶಸ್ತಿ ನೀಡಲು ಸಲಹೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊರಡಾದ ನಾಧವರ್ಷಿಣಿ ಟ್ರಸ್ಟ್ ಅಧ್ಯಕ್ಷರ ಹಿಂದೂಸ್ತಾನಿ ಸಂಗಿತ ಕಲಾವಿದರೂ ಆಗಿರುವ ಸುಧಾಮ ಎಸ್ ದಾನಗೇರಿ ಮಾತನಾಡಿ, ಕಲೆ ಸಂಗೀತ, ಸಾಹಿತ್ಯ ಯಕ್ಷಗಾನ ಗಳೆಲ್ಲ ನಮ್ಮ ಸನಾತನ ಧರ್ಮವನ್ನು. ಉಳಿಸಿ ಬೆಳೆಸುವಂತ ಕಲೆಗಳಾಗಿವೆ. ಇದೆಲ್ಲವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದಿನ ದಿನಗಳಲ್ಲಿ ಮೊಬೈಲ್, ಟಿವಿ, ಸಿನೆಮಾ, ಗಳ ಹಾವಳಿ ಅತಿಯಾಗಿದೆ, ಇವುಗಳ ಹಾವಳಿಯಿಂದ ಜನತೆಗೆ ಸಿಗುವ ಉಚಿತ ಸಲಹೆ ಗಳೆಂದರೆ, ಸಮಾಜದಲ್ಲಿ ಕಳ್ಳತನ ಹೇಗೆ ಮಾಡುವುದು, ಕೊಲೆ ಹೇಗೆ ಮಾಡಬಹುದು, ಇನ್ನೊಬ್ಬರ ಮನೆ ಹೇಗೆ ಹಾಳುಮಾಡಬಹುದು ಎನ್ನುವುದಾಗಿದೆ, ಇದನ್ನು ಸುಲಭವಾಗಿ ತೋರಿಸುತ್ತಾರೆ, ಧಾರಾವಾಹಿ ಗಳಂತೂ ಮನೆ ಹಾಳುಮಾಡುವ ದೃಶ್ಯ ಗಳಿಂದಲೇ ಆರಂಬವಾಗುತ್ತವೆ, ಇವೆಲ್ಲ ಸಮಾಜದ ಉತ್ತಮ ಬೆಳವಣಿಗೆಗೆ ಮಾರಕ ವಾಗಿವೆ, ಇವೆಲ್ಲ ನಿಲ್ಲಬೇಕು ಎಂದರೆ ನಮ್ಮ ಸನಾತನ ಕಲೆಗಳ ಬೆಳವಣಿಗೆ ಮಾಡುವ ಸಂಸ್ಥೆ ಗಳಿಗೆ ಪ್ರೋತ್ಸಾಹಿಸಿ ಉತ್ತಮ ಸಮಾಜ ನಿರ್ಮಾಣಕ್ಕೆಸಹಕರಿಸೋಣಎಂದು, ಸಂಘಟನೆ ಯನ್ನು ಉತ್ತಮವಾಗಿ ಮಾಡುತ್ತಿರುವ ಸಪ್ತ ಸ್ವರ ಸಂಸ್ಥೆಯನ್ನು ಅಭಿನಂದಿಸಿದರು

ಕಾರ್ಯಕ್ರಮ ದಲ್ಲಿ ವಿವಿಧ ಸಾಧಕರಿಗೆ, ಸಂಘಟನೆ ಮಾಡಿದವರಿಗೆ, ಚಿತ್ರ ಕಲೆಯಲ್ಲಿ ಉತ್ತಮರಿಗೆ, ಯಕ್ಷಗಾನ ದಲ್ಲಿ ಏಳು ದಿನಗಳ ಕಾಲ ಸುಶ್ರಾವ್ಯವಾಗಿ ಹಾಡುವ ಮೂಲಕ ಸಂಗೀತ ರಾಸಔತಣ ನೀಡಿದ ಅಂಕೋಲಾ ದ ಆನಂದ ಆಗೇರ ಸಂಗಡಿಗರಿಗೆ ಉಚಿತ ಊಟ ನೀಡುತ್ತಿರುವ ಪರಮೇಶ್ವರ ಸಿದ್ದಿ ದಂಪತಿಗಳಿಗೆ ಸಾನ್ಮಾನಿಸಿ ಗೌರವಿಸಲಾಯಿತು, ವೇದಿಕೆಯಲ್ಲಿ ಪತ್ರಕರ್ತ ಹರೀಶ ಭಟ್, ನರಶಿಂಹ ಭಾಗ್ವತ್, ಅಧ್ಯಕ್ಷೆ ಸುಮಂಗಲಾ ದೇಸಾಯಿ ರಾಘವೇಂದ್ರ ನಾಯ್ಕ್ ಶ್ರೀಮತಿ ಪುಲು ಲುಯಿಸ್ ಪರ್ನಾಂಡಿಸ,ಉಪಸ್ಥಿತರಿದ್ದರು
ಕಾರ್ಯಕ್ರಮ ವನ್ನು ರಾಧಾ ಹೆಗಡೆ, ಸಂದ್ಯಾ ದೇಸಾಯಿ, ಗಾಯತ್ರಿ ಹೆಗಡೆ ಸಾವಿತ್ರಿ ಭಾಗ್ವತ, ಇತರರು ನಿರ್ವಹಿಸಿದರು.ನಂತರ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗ ವನ್ನು ಸಂಸ್ಥೆಯ ಹೆಣ್ಣುಮಕ್ಕಳು ತಾವೇನು ಗಂಡಸರಿಗೆ ಕಡಿಮೆ ಇಲ್ಲ ಎನ್ನುವಂತೆ ಅಭಿನಯಿಸಿತೋರಿಸಿದರು. ಯಕ್ಷಗಾನ ಕಲೆಯನ್ನು ಹಲವು ವರ್ಷ ಗಳಿಂದ ಅಭಿನಯಿಸುತ್ತಿರುವ ಕುಮಾರಿ ಮಾನ್ಯಅವರ ಅಭಿನಯ ಸಂಘಟನೆಗೆ ದೊಡ್ಡ ಮೆರಗು ನೀಡಿದರೆ, ಚಿಕ್ಕ ಮಕ್ಕಳೊಂದಿಗೆ ಅಭಿನಯಿಸಿದ ಸಂಘಟಕರೂ ಕೂಡ ಮೆಚ್ಚುಗೆ ಪಡೆದರು ಹೀಗೆ ಏಳು ದಿನಗಳ ಕಾಲ ಜನರು ಉಚಿತ ಯಕ್ಷಗಾನ ವೀಕ್ಸಿಸಿ ಆನಂದಿಸಿದರು.