ಸುದ್ದಿ ಕನ್ನಡ ವಾರ್ತೆ
ಜೊಯಿಡಾ ತಾಲೂಕಿನ ಅಣಶಿ ಕಾಜುವಾಡಾ ಗ್ರಾಮದ ರೈತ ಕಾಶಿನಾಥ್ ಸೋಮಣ್ಣ ಕಾಜುಗಾರ್ ಮೇಲೆ ಕಣಜ ಹುಳು ದಾಳಿ ಮಾಡಿದೆ. ಜೀವನ್ಮರಣ ನಡುವೆ ಹೋರಾಟಠ ನಡೆಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಹಾರ ಮತ್ತು ಆಸ್ಪತ್ರೆ ಖರ್ಚುವೆಚ್ಚ ತಪ್ಪಿಸಲು ತಮಗೆ ಏನು ಗೊತ್ತಿಲ್ಲದಂತೆ ಎಂಟು ದಿನಗಳಿಂದ ಮೌನವಾಗಿದ್ದಾರೆ. ಅರಣ್ಯ ಅಧಿಕಾರಿಗಳ ನಡೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಅಣಶಿ ಗ್ರಾಮದ ರೈತ ಕಾಶಿನಾಥ್ ಸೋಮಣ್ಣ ಕಾಜುಗಾರ್ (60) ಇವರ ಮೇಲೆ ಕಳೆದ ಗುರುವಾರ ತೋಟದಲ್ಲಿ ಬೆಳೆದ ಹುಲ್ಲು ಕೀಳುವಾಗ ಕಣಜ ನೋಣ ದಾಳಿ ಮಾಡಿದೆ. ಹೇಗೊ ತಪ್ಪಿಸಿಕೊಂಡು ಮನೆಗೆ ಬಂದಿದ್ದಾರೆ. ಮಾರನೆಯ ದಿನ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಅಲ್ಲಿಯೂ ಚಿಕಿತ್ಸೆ ಫಲಿಸದೇ ಸೋಮವಾರ ಅಣಶಿ ಮನೆಗೆ ಕಳುಹಿಸಿದ್ದಾರೆ. ಬುಧವಾರ ಕುಟುಂಬದವರು ಗೋವಾ ಬಾಂಬೊಲಿ ಜಿ ಎಮ್ ಸಿ ಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅರಣ್ಯ ಇಲಾಖೆ ಮೌನ.
ಕಳೆದ ಗುರುವಾರ ರೈತ ಕಾಶಿನಾಥ್ ಸೋಮಣ್ಣ ಕಾಜುಗಾರ್ ಮೇಲೆ ಕಣಜ (ಕಡಜ, ಕಡಿ ಜೀರಿಗೆ ಹುಳು) ದಾಳಿ ಮಾಡಿದೆ. ಮಾರನೇಯ ದಿನ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾದಾಗ ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈ ವಿಷಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲ ದಂತೆ ವರ್ತಿಸಿದ್ದಾರೆ. ಬುಧವಾರ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾವಡಾ ಅಣಶಿ ವಲಯ ಅರಣ್ಯಾಧಿಕಾರಿಗೆ ದೂರವಾಣಿ ಕರೆ ಮಾಡಿದಾಗ ಕಾಟಾಚಾರಕ್ಕೆ ಉಪವಲಯ ಅರಣ್ಯಾಧಿಕಾರಿಗಳನ್ನು ಕಳುಹಿಸಿ ಮಾಹಿತಿ ಪಡೆದು, ಫೋಟೋ ಮಾಡಿ ಬಂದಿದ್ದಾರೆ. ಆದರೆ ಚಿಕಿತ್ಸೆ ಅಥವಾ ಪರಿಹಾರದ ಯಾವುದೇ ಭರವಸೆ ಕುಟುಂಬಕ್ಕೆ ನೀಡಿಲ್ಲ.
ಬಲಿ ಪಡೆಯುವ ಕಣಜ ಹುಳು.
ಕರಡಿ, ಆನೆ, ಸಿಂಹ, ನಾಗರ ಹಾವು, ಕಾಳಿಂಗ ದಂತೆ ಕಣಜ ಹುಳು ಅಷ್ಟೇ ವಿಷಪೂರಿತ ಮತ್ತು ಘಾತುಕ ವಾಗಿದೆ. ಇದು ಕಚ್ಚಿದರೆ ಸಾವು ಖಚಿತ. ಗುರುವಾರ ರೈತ ಕಾಶಿನಾಥ್ ಮೇಲೆ ನೂರಾರು ಕಣಜ ಹುಳು ದಾಳಿ ಮಾಡಿದೆ. ಚಿಕಿತ್ಸೆ ಫಲಕಾರಿಯಾಗದೆ ರೈತ ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿದ್ದಾರೆ. ಜೀವ ಬದುಕಿ ಮರಳಿ ಬರುವುದು ಕಷ್ಟದಾಯಕ ವಾಗಿದೆ. ಅರಣ್ಯ ಇಲಾಖೆ ರೈತನ ಖರ್ಚು ವೆಚ್ಚ ಮತ್ತು ಪರಿಹಾರ ನೀಡಿ ಕುಟುಂಬಕ್ಕೆ ಭದ್ರತೆ ನೀಡುವ ಬದಲು ತಮಗೇನು ಸಂಬಂಧ ಇಲ್ಲದಂತೆ ಮೌನವಹಿಸಿದ್ದು ಅನುಮಾನಕ್ಕೆ ಕಾರಣವಾಗಿದೆ.
ಖಾಸಗಿ ಆಸ್ಪತ್ರೆಗೆ ಏಕೆ ತೋರಿಸಿಲ್ಲ ?
ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಗೊತ್ತಿದ್ದರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿಲ್ಲ ಎಂದು ಸ್ಥಳೀಯರು ಪ್ರಶ್ನೆ ಮಾಡಬಹುದೆಂದು ವಿಷಯ ಗೊತ್ತಿದ್ದರೂ ಮೌನವಾಗಿರುವ ಹಿಂದಿನ ಕಾರಣವೇನು . ಸೋಮಣ್ಣ ಕಾಜುಗಾರ್ ರೈತನ ಬಡ ಕುಟುಂಬದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿಲ್ಲ. ಬಡತನ ಅಸಹಾಯಕತೆ ರೈತನ ಸಾವು ಬದುಕಿನ ಸ್ಥಿತಿಗೆ ಕಾರಣವಾಗಿದೆ.
ಹೆಚ್ಚಿನ ಚಿಕಿತ್ಸೆ ಅಗತ್ಯ.
ತಂದೆಯವರಿಗೆ ಕಾರವಾರ, ಹುಬ್ಬಳ್ಳಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಏನೂ ಪ್ರಯೋಜನ ಆಗಿಲ್ಲ. ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿದ್ದಾರೆ. ಗೋವಾ ದವಾಖಾನೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆ ಖರ್ಚು ವೆಚ್ಚ ಭರಿಸಿ ಪರಿಹಾರ ನೀಡಬೇಕು.
ಶಾಣೊ ಕಾಜುಗಾರ
ರೈತನ ಮಗ.
ಪರಿಹಾರ ಮತ್ತು ಕುಟುಂಬಕ್ಕೆ ಭದ್ರತೆ ನೀಡಬೇಕು.
ಅಣಶಿ ರೈತ ಕಾಶಿನಾಥ್ ಮೇಲೆ ಕಣಜ ಹುಳು ದಾಳಿ ಮಾಡಿದೆ. ವಿಷಯ ಪೂರ್ತಿ ಹುಳು ದಾಳಿಯಿಂದ ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಚಿಕಿತ್ಸೆ ನೀಡಲು ಮಿನಾಮೇಷ ಎಣಿಸಬಾರದು. ಕೂಡಲೇ ಸ್ಪಂದಿಸಿ ಪರಿಹಾರ ನೀಡದೇ ಇದ್ದರೆ ಹೋರಾಟ ಅನಿವಾರ್ಯ ಆಗಲಿದೆ.
ಸುಭಾಷ್ ಗಾವಡಾ
ಅಧ್ಯಕ್ಷರು ಜಿಲ್ಲಾ ಕುಣಬಿ ಸಮಾಜ.
ಸ್ಪೇಷಲ್ ಪ್ರಕರಣ ಮಾಡುತ್ತೇವೆ.
ಅರಣ್ಯ ಇಲಾಖೆಯಲ್ಲಿ ಕಣಜ ಹುಳು, ಜೇನು ಹುಳು , ಹಾವು ಕಡಿದರೆ ಪರಿಹಾರ ನೀಡುವ ಅವಕಾಶ ಇಲ್ಲ. ಯಲ್ಲಾಪುರ ದಲ್ಲಿ ಇಂತಹ ಘಟನೆ ನಡೆದಾಗ ಸ್ಪೇಷಲ್ ಪ್ರಕರಣ ದಾಖಲಿಸಿ ಪರಿಹಾರ ನೀಡಲಾಗಿದೆ. ಈ ರೀತಿ ಪ್ರಕರಣ ಮಾಡಿ ಪರಿಹಾರ ನೀಡಲು ಪ್ರಯತ್ನ ಮಾಡುತ್ತೇವೆ.
ರಾಮು ಗೌಡ
ವಲಯ ಅರಣ್ಯಾಧಿಕಾರಿ ಅಣಶಿ.
