ಸುದ್ಧಿಕನ್ನಡ ವಾರ್ತೆ
Goa : ಅಖಿಲ ಹವ್ಯಕ ಮಹಾಸಭೆಯು ಡಿಸೆಂಬರ್ 27 ರಿಂದ 29 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಆಯೋಜಿಸಲಾಗಿದೆ. ಈ ಅದ್ಧೂರಿಯ ಸಮಾರಂಭದ ಪೂರ್ವಭಾವಿ ಸಿದ್ಧತೆಗಾಗಿ ಮಡಗಾಂವ ಮೂಗಾಳಿಯ ರೇಖಾ ಮತ್ತು ಎಂ.ಕೆ.ಹೆಗಡೆ ರವರ ಮನೆಯಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.

ಈ ಸಭೆಯಲ್ಲಿ ಹವ್ಯಕ ಮಹಾಸಭೆಯ ಕ್ರಿಯಾಶೀಲ ಅಧ್ಯಕ್ಷರಾದ ಡಾ.ಗಿರಿಧರ ಕಜೆ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು-ಈ ಹಹವ್ಯಕ ಸಮ್ಮೇಳನಕ್ಕೆ ಎಲ್ಲರೂ ಆಗಮಿಸಬೇಕು. 81 ನೇಯ ಸಹಸ್ರ ಚಂದ್ರೋತ್ಸವದಲ್ಲಿ 81 ಜನ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಊಟೋಪಚಾರ ವ್ಯವಸ್ಥೆ ಇರಲಿದೆ. ಹವ್ಯಕ ಮಹಾಸಭೆಗೆ ಎಲ್ಲಡೂ ಖಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು, ಅಂದಾಗ ಮಾತ್ರ ನಮ್ಮ ಸಂಖ್ಯೆ ಎಷ್ಟಿದೆ ಎಂಬುದು ಅಧೀಕೃತವಾಗಿ ತಿಳಿಯಲು ಸಾಧ್ಯ ಎಂದರು.

ಇಂತಹ ಒಂದು ಬೃಹತ್ ಸಮ್ಮೇಳನದಲ್ಲಿ ಎಲ್ಲ ಹವ್ಯಕ ಬಾಂಧವರೂ ಪಾಲ್ಗೊಳ್ಳಬೇಕು ಎಂದು ಈ ಸಭೆಯಲ್ಲಿ ಡಾ.ಗಿರಿಧರ್ ಕಜೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಗೋವಾದ ವಿವಿದೆಡೆ ನೆಲೆಸಿರುವ ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.