ಸುದ್ಧಿಕನ್ನಡ ವಾರ್ತೆ
Goa (IFFI) : ಗೋವಾದಲ್ಲಿ ನಡೆಯಲಿರುವ 55 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಉಧ್ಘಾಟನಾ ಸಮಾರಂಭ ನವೆಂಬರ್ 20 ರಂದು ಸಂಜೆ 5 ಗಂಟೆಗೆ ಪಣಜಿ ಸಮೀಪದ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂ ನಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಮಂತ್ರಿ ಅಶ್ವಿನಿ ವೈಷ್ಣವ್, ಮಾಹಿತಿ ಪ್ರಸಾರಣ ರಾಜ್ಯ ಮಂತ್ರಿ ಡಾ.ಎಲ್ ಮುರುಗನ್, ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್, ಬಾಲಿವುಡ್ ನಟ ಅಭಿಷೇಕ ಬ್ಯಾನರ್ಜಿ, ಭೂಮಿ ಪೆಡ್ನೇಕರ್ ರವರು ಉಪಸ್ಥಿತರಿರುವರು. ಅಂತೆಯೇ ದೇಶ-ವಿದೇಶಿಯ ಚಲನಚಿತ್ರ ಕ್ಷೇತ್ರದ ದಿಗ್ಗಜರು ಈ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂತರಾಷ್ಟ್ರೀಯ ಚಲನಚಿತ್ರೋತ್ಸವವು (IFFI) ನವೆಂಬರ್ 20 ರಿದ 28 ರವರೆಗೆ ನಡೆಯಲಿದೆ. ಪ್ರಸಕ್ತ ವರ್ಷ ಚಲನಚಿತ್ರೋತ್ಸವದಲ್ಲಿ ಆಸ್ಟ್ರೇಲಿಯಾ ಕಂಟ್ರಿ ಫೊಕಸ್ ಎಂದು ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಆಸ್ಟ್ರೇಲಿಯಾ ದೇಶದ ಹಲವು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.
ಪ್ರಸಕ್ತ ವರ್ಷ ಚಲನಚಿತ್ರೋತ್ಸವದಲ್ಲಿ 15 ಜಾಗತಿಕ, 40 ಏಷ್ಯಾ ಪ್ರೀಮಿಯರ್, ಹಾಗೂ 106 ಭಾರತೀಯ ಚಲನಚಿತ್ರಗಳು ಸೇರಿ ಒಟ್ಟೂ 180 ಕ್ಕೂ ಅಧಿಕ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಇದರಲ್ಲಿ 81 ದೇಶದಲ್ಲಿನ ಪುರಸ್ಕಾರ ಪಡೆದ ಚಲನಚಿತ್ರಗಳು ಒಳಗೊಂಡಿದೆ. ಇದು ಚಲನಚಿತ್ರ ಪ್ರೇಮಿಗಳಿಗೆ ಒಂದು ಹಬ್ಬವಾಗಿದೆ.